ಗದಗ, 25 ಮೇ (ಹಿ.ಸ.) :
ಆ್ಯಂಕರ್ : ಗದಗ ಜಿಲ್ಲೆಯ ನರೇಗಲ್ ಪಟ್ಟಣದ ಐತಿಹಾಸಿಕ ಹಿನ್ನೆಲೆಯೆಯುಳ್ಳ ರೆಹಮಾನ ಶ್ಯಾವಲಿ ದರ್ಗಾದ ಉರುಸು, ದರಗಾದ ಮಂಜೂರ ಹುಸೇನ ಶ್ಯಾವಲಿ ಶರಣರ ನೇತೃತ್ವದಲ್ಲಿ ಸಂಭ್ರಮದಿಂದ ಜರುಗಿತು.
ದರ್ಗಾದಿಂದ ಪ್ರಾರಂಭವಾದ ಉರುಸಿನ ಮಾರುತಿ ಗಜಾನನ ಮೆರವಣಿಗೆಯು ದೇವಸ್ಥಾನ, ದೇವಸ್ಥಾನ, ದ್ಯಾಮವ್ವನ ದೇವಸ್ಥಾನ, ಕೊಂತಿಮಲ್ಲಪ್ಪನ ದೇವಸ್ಥಾನ, ಪಟ್ಟಣ ಪಂಚಾಯತ, ದುರ್ಗಾ ಸರ್ಕಲ್, ಜಕ್ಕಲಿ ಕ್ರಾಸ್, ಹಳೆ ಬಸ್ ನಿಲ್ದಾಣ, ಮಾರೆಮ್ಮ ದೇವಸ್ಥಾನದ ಮೂಲಕ ಮರಳಿ ದರ್ಗಾ ತಲುಪಿತು.
ಪಟ್ಟಣ ಸುತ್ತಲಿನ ಸೇರಿದಂತೆ ಗ್ರಾಮಗಳ ಸಾವಿರಾರು ಜನ ಭಕ್ತಾದಿಗಳು ಉರುಸಿನ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಹಿಂದೂಸ್ತಾನ್ ಸಮಾಚಾರ್ / Lalita MP