ಟೇಬಲ್ ಟನ್ನೀಸ್‌ನಲ್ಲಿ ಕೋಲಾರ ಜಿಲ್ಲೆಯ ಕ್ರೀಡಾಪಟುಗಳ ಸಾಧನೆ
ಟೇಬಲ್ ಟನ್ನೀಸ್‌ನಲ್ಲಿ ಕೋಲಾರ ಜಿಲ್ಲೆಯ ಕ್ರೀಡಾಪಟುಗಳ ಸಾಧನೆ
ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.


ಕೋಲಾರ, ಮೇ.೨೪ (ಹಿ.ಸ) :

ಆ್ಯಂಕರ್ : ಪಿ. ಗೋಪಾಲನ್ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಕೋಲಾರ ತಾಲೂಕಿನ ಹೊನ್ನೇನಹಳ್ಳಿಯ ಜಿ. ದೊರೆಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನಿಸ್ ಮತ್ತು ಚೆಸ್ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.

ಹತ್ತೊಂಬತ್ತು ವರ್ಷ ಒಳಗಿನ ವಿಭಾಗದಲ್ಲಿ ಟೇಬಲ್ ಟೆನ್ನೀಸ್‌ನಲ್ಲಿ ಕೋಲಾರ ಜಿಲ್ಲಯವರೇ ಅಧ ಚಂದನ್ ಎಸ್ ಪ್ರಥಮ, ಸಾಯಿ ಚಿನ್ಮಯ್ ಪಿ ದ್ವಿತೀಯಾ, ಹದಿಮೂರು ವರ್ಷ ಒಳಗಿನ ವಿಭಾಗದಲ್ಲಿ ತನಿಶ್ ಪ್ರಥಮ, ಸುದೀಕ್ಷಾ ದ್ವಿತೀಯ, ಹತ್ತು ವರ್ಷದೊಳಗಿನ ವಿಭಾಗದಲ್ಲಿ ಇಂದ್ರನ್ ಎಸ್ ಕುಮಾರ್ ಪ್ರಥಮ, ಹೃತ್ವಿಕ್ ದ್ವಿತೀಯ ಸ್ಥಾನದೊಂದಿಗೆ ಭುವನ್, ಭನ್ವಿತಾ, ನಿಹಾಲ್, ಹೇಮಂತ್, ದನುಷ್, ಮನೋಮಯಿ, ಲಕ್ಷ್ಮಿ, ಯೋಗನಾ ಸೇರಿದಂತೆ ಸುಮಾರು ೧೫೦ ಕ್ರೀಡಪಟುಗಳು ಭಾಗವಹಿಸಿದ್ದರು.

ಕ್ರೀಡಾ ವಿಜೇತರನ್ನು ಅಂತರಾಷ್ಟ್ರೀಯ ಅಥ್ಲೀಟ್ ಜಿ ದೊರೆಸ್ವಾಮಿ ಆಚಾರಿ, ಚೆಸ್ ಕೋಚ್ ಧನಲಕ್ಷ್ಮಿ, ಟೇಬಲ್ ಟೆನ್ನಿಸ್ ಕೋಚ್ ಪ್ರಸನ್ನ, ಡಾ.ಮನೋಹರ್ ಗೌಡ ಬಿ.ಜಿ ಮತ್ತು ಡಾ ಮಂಜುನಾಥ್, ಚೆಸ್ ಆರ್ಬಿಟಾರ್ ಜಯಂತೀರ ಕುಮಾರ್ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.

ಚಿತ್ರ : ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿಯಲ್ಲಿ ನಡೆದ ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ವಿಜೇತ ಕ್ರೀಡಾಪಟುಗಳನ್ನು ಅಭಿನಂದಿಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande