ಗದಗ, 24 ಮೇ (ಹಿ.ಸ.) :
ಆ್ಯಂಕರ್ : ಗದಗ ಶಿರಹಟ್ಟಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಸತಿ ನಿಲಯಗಳಾದ ಬಾಲಕ ವಸತಿ ನಿಲಯ ಶಿರಹಟ್ಟಿ, ಸಾರ್ವಜನಿಕ ಹೆಣ್ಣು ಮಕ್ಕಳ ವಸತಿ ನಿಲಯ ಶಿರಹಟ್ಟಿ, ಸರ್ಕಾರಿ ಬಾಲಕರ ವಸತಿ ನಿಲಯ ಕಡಕೋಳ, ಬನ್ನಿಕೊಪ್ಪ, ಸೂರಣಗಿ, ಬಾಲೆಹೊಸೂರು ಇಲ್ಲಿ ಖಾಲಿ ಇರುವ ಸ್ಥಳಗಳಿಗೆ ಅರ್ಹ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಇತರೇ ಹಿಂದುಳಿದ ವರ್ಗಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ವಸತಿನಿಲಯ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರವೇಶ ಬಯಸುವ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಕಡ್ಡಾಯವಾಗಿ ವೆಬ್ಸೈಟನಲ್ಲಿ ನೋಂದಣಿ ಮಾಡಿಕೊಂಡು ನಂತರ ಲಾಗಿನ್ ಐಡಿ ಹಾಗೂ ಪಾಸ್ವರ್ಡ ಬಳಸಿ ಕೆವೈಸಿ ಮುಖಾಂತರ ವಸತಿ ನಿಲಯಕ್ಕೆ ಅರ್ಜಿ ಸಲ್ಲಿಸುವುದು ಹಾಗೂ ಸಲ್ಲಿಸಿದ ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು ದಾಖಲೆಗಳನ್ನು ಲಗತ್ತಿಸಿ ಸಂಬಂಧಿಸಿದ ಮುಖ್ಯೋಪಾಧ್ಯಯರಿಂದ ಅಗತ್ಯ ದಾಖಲೆಗಳನ್ನು ದೃಢೀಕರಿಸಿ ಸಹಾಯಕ ನಿರ್ದೇಶಕರ ಕಾರ್ಯಾಲಯ, ಸಮಾಜ ಕಲ್ಯಾಣ ಇಲಾಖೆ, ಶಿರಹಟ್ಟಿ ಇಲ್ಲಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಗಸ್ಟ 31 ಆಗಿದ್ದು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳನ್ನು ಸೀಟುಗಳ ಲಭ್ಯತೆಯನುಸಾರ ಪ್ರವೇಶ ಒದಗಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಸಮಾಜಕಲ್ಯಾಣ ಇಲಾಖೆ ಶಿರಹಟ್ಟಿ ಕಾರ್ಯಾಲಯ ದೂರವಾಣಿ ಸಂಖ್ಯೆ 08487-295097 ಇಲ್ಲಿ ಸಂಪರ್ಕಿಸಬಹುದಾಗಿದೆ.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಿದ ಸ್ವೀಕೃತಿ ಪ್ರತಿ. ಸಂಬಂಧಿಸಿದ ಶಾಲಾ ಮುಖ್ಯೋಪಾದ್ಯಾಯರ ಸಹಿಯೋಂದಿಗೆ, ವಿದ್ಯಾರ್ಥಿಗಳ ಎಸ್ ಎಸ್ ಪಿ, ಐಡಿ ಸಂಖ್ಯೆ. ವಿದ್ಯಾರ್ಥಿಗಳ ಆಧಾರ ಕಾರ್ಡ ಝರಾಕ್ಸ ಪ್ರತಿ, ವಿದ್ಯಾರ್ಥಿಗಳಆಧಾರ ಸಂಖ್ಯೆಗೆ ಜೊಡಣೆಯಾದ ಮೊಬೈಲ್ ಸಂಖ್ಯೆ, ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ.(ಝರಾಕ್ಸ ಪ್ರತಿ), ಆದಾಯ ಪ್ರಮಾಣ ಪತ್ರ (ಝರಾಕ್ಸ್ ಪ್ರತಿ),ವಿದ್ಯಾರ್ಥಿಗಳ 3 ಪಾಸ್ ಪೋರ್ಟ ಅಳತೆ ಭಾವಚಿತ್ರ.ವಿದ್ಯಾರ್ಥಿಗಳ ಹಿಂದಿನ ತರಗತಿಯ ಅಂಕಪಟ್ಟಿ ಪ್ರತಿ. (ಝರಾಕ್ಸ್ ಪ್ರತಿ), ಪಡಿತರ ಚೀಟಿ (ರೇಷನ್ಕಾರ್ಡ ಝರಾಕ್ಸ್ ಪ್ರತಿ) ವಿದ್ಯಾರ್ಥಿ / ವಿದ್ಯಾರ್ಥಿನಿಯರ ಎಸ್ ಎಸ್ ಪಿಐ ಆ ಸಂಖ್ಯೆಯನ್ನು ಸಂಬಂಧಿಸಿದ ಶಾಲಾ ಮುಖ್ಯೋಪಾದ್ಯಾಯರಿಂದ ಪಡೆದುಕೊಳ್ಳುವುದು ಎಂದು ಶಿರಹಟ್ಟಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Lalita MP