ನವದೆಹಲಿ, 23 ಮೇ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಫಲವಾಗಿ ಅಮೆರಿಕದ ಇಲಿನಾಯ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಭಾರತದಲ್ಲಿ ತನ್ನ ಮೊದಲ ಕ್ಯಾಂಪಸ್ ತೆರೆಯಲು ಯುಜಿಸಿ ಅನುಮೋದನೆ ನೀಡಿದೆ.
ಮುಂಬೈನಲ್ಲಿ 2026 ರಲ್ಲಿ ಆರಂಭವಾಗುವ ಈ ಕ್ಯಾಂಪಸ್ನಲ್ಲಿ ಕಂಪ್ಯೂಟರ್ ವಿಜ್ಞಾನ, ಎಂಜಿನಿಯರಿಂಗ್, ವ್ಯವಹಾರ ಕ್ಷೇತ್ರಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ನೀಡಲಾಗುತ್ತದೆ.
ಇದೇ ವೇಳೆ ಇತರ ಐದು ವಿದೇಶಿ ವಿಶ್ವವಿದ್ಯಾಲಯಗಳು ಕೂಡ ಭಾರತದಲ್ಲಿ ಕ್ಯಾಂಪಸ್ ತೆರೆಯಲು ತಯಾರಿ ನಡೆಸುತ್ತಿವೆ. ಇವುಗಳಲ್ಲಿ ಲಿವರ್ಪೂಲ್ ವಿಶ್ವವಿದ್ಯಾಲಯ (ಯುಕೆ), ವಿಕ್ಟೋರಿಯಾ ಮತ್ತು ವೆಸ್ಟರ್ನ್ ಸಿಡ್ನಿ ವಿಶ್ವವಿದ್ಯಾಲಯಗಳು (ಆಸ್ಟ್ರೇಲಿಯಾ), ಇಟಲಿಯ ಇಸ್ಟಿಟುಟೊ ಯುರೋಪಿಯೊ ಡಿ ಡಿಸೈನ್ ಹಾಗೂ ಯುಕೆಯ ಯಾರ್ಕ್ ವಿಶ್ವವಿದ್ಯಾಲಯ ಸೇರಿವೆ.
ಇದರಿಂದ ಭಾರತೀಯ ವಿದ್ಯಾರ್ಥಿಗಳಿಗೆ ವಿಶ್ವಮಟ್ಟದ ಶಿಕ್ಷಣವು ದೇಶದಲ್ಲಿಯೇ ಲಭ್ಯವಾಗಲಿದ್ದು, ಜಾಗತಿಕ ಶಿಕ್ಷಣದಲ್ಲಿ ಭಾರತ ಪ್ರಮುಖ ಕೇಂದ್ರವನ್ನಾಗಿ ಪರಿವರ್ತನೆಗೊಳ್ಳಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa