ಗೃಹರಕ್ಷಕ ದಳ : ನೋಂದಣಿಗೆ ಅರ್ಜಿ ಆಹ್ವಾನ
ರಾಯಚೂರು, 23 ಮೇ (ಹಿ.ಸ.) : ಆ್ಯಂಕರ್ : ಗೃಹರಕ್ಷಕ ದಳದಿಂದ ನಾಗರೀಕ ಪೌರ ರಕ್ಷಣಾ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯಲ್ಲಿ ಯುದ್ಧದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಕಿಸುವ ಬಗ್ಗೆ ಸ್ವಯಂ ಸೇವಕರ ಅಗತ್ಯವ
ಗೃಹರಕ್ಷಕ ದಳ : ನೋಂದಣಿಗೆ ಅರ್ಜಿ ಆಹ್ವಾನ


ರಾಯಚೂರು, 23 ಮೇ (ಹಿ.ಸ.) :

ಆ್ಯಂಕರ್ : ಗೃಹರಕ್ಷಕ ದಳದಿಂದ ನಾಗರೀಕ ಪೌರ ರಕ್ಷಣಾ ಸ್ವಯಂ ಸೇವಕರಾಗಲು ನೋಂದಣಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯಲ್ಲಿ ಯುದ್ಧದಂತಹ ಸಂದರ್ಭಗಳಲ್ಲಿ ಉಂಟಾಗುವ ಸಂಭವನೀಯ ಅಪಘಾತಗಳಿಂದ ಸಾರ್ವಜನಿಕರನ್ನು ರಕ್ಷಕಿಸುವ ಬಗ್ಗೆ ಸ್ವಯಂ ಸೇವಕರ ಅಗತ್ಯವಿರುವುದರಿಂದ ಸಿವಿಲ್ ಡಿಫೇನ್ಸ್ ಆಕ್ಟ್ 1968 ರಂತೆ ಪ್ರತಿ 100 ನಾಗರೀಕರಿಗೆ ಒಬ್ಬರಂತೆ ಪೌರರಕ್ಷಣಾ ಸ್ವಯಂ ಸೇವಕರನ್ನು ನೋಂದಣಿ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತರು ಮೇ.31ರೊಳಗಾಗಿ ನಿಗಧಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ಗೃಹರಕ್ಷಕದಳ ಜಿಲ್ಲಾ ಸಮಾದೇಷ್ಟರ ಕಚೇರಿ ಪ್ರಥಮ ದರ್ಜೆ ಕಾಲೇಜಿನ ಹಿಂದೆ ನಿಜಲಿಂಗಪ್ಪ ಕಾಲೋನಿ ರಾಯಚೂರು ಹಾಗೂ ಪೌರರಕ್ಷಣಾ ಕಚೇರಿ ಆರ್.ಟಿ.ಪಿ.ಎಸ್ ಕಾಲೋನಿ ಶಕ್ತಿನಗರ ಟೈಪ್-2 ಮನೆ.ನಂ. 03, ಶಕ್ತಿನಗರ, ಜಿ.ರಾಯಚೂರು ಅಥವಾ hgcd.karnataka.gov.in. . ಮೂಲಕ ಅರ್ಜಿಗಳನ್ನು ಪಡೆದುಕೊಂಡು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 4ನೇ ತರಗತಿ ಉತ್ತೀರ್ಣರಾಗಿರಬೇಕು. ದೈಹಿಕವಾಗಿ ಸಧೃಡವಾಗಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ ಕಾರ್ಡ್ ನಕಲು ಪ್ರತಿ ಮತ್ತು ಅಂಕಪಟ್ಟಿ ಅಥವಾ ಶಾಲಾ ವರ್ಗಾವಣೆ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ನಾಗರೀಕ ಪೌರರಕ್ಷಣಾ ಸ್ವಯಂ ಸೇವಕ ಸಂಸ್ಥೆಯಾಗಿದ್ದು ಯಾವುದೆ ಮಾಸಿಕ ವೇತನ ಇರುವದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ ದೂರವಾಣಿ ಸಂಖ್ಯೆ: 08532-221679, 9686767151 ಮತ್ತು ಶಕ್ತಿನಗರ ಪೌರರಕ್ಷಣಾ ಕಚೇರಿ ದೂರವಾಣಿ ಸಂಖ್ಯೆ: 9741333806ಗೆ ಸಂಪರ್ಕಿಸುವಂತೆ ಜಿಲ್ಲಾ ಗೃಹರಕ್ಷಕದಳ ಕಮಾಂಡೆಂಟ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande