ರಾಯಚೂರು : ವಿದ್ಯುನ್ಮಾನ ಮಾಪಕ ; ಸಹಕರಿಸುವಂತೆ ಮನವಿ
ರಾಯಚೂರು, 23 ಮೇ (ಹಿ.ಸ.) : ಆ್ಯಂಕರ್ : ಜೆಸ್ಕಾಂ ಇಲಾಖೆಯಿಂದ ರಾಯಚೂರು ನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲೆಕ್ಟ್ರೋ-ಮೆಕ್ಯಾನಿಕಲ್, ನೇರ ಸಂಪರ್ಕ ಹಾಗೂ ವಿದ್ಯುತ್ ಯುನಿಟ್‍ಗಳನ್ನು ದಾಖಲಿಸದ ವಿದ್ಯುತ್ ಸ್ಥಾವರಗಳಿಗೆ ಹೊಸ ವಿದ್ಯುನ್ಮಾನ ಮಾಪಕಗಳನ್ನು ಅಳವಡಿಸಲಾಗುತ್ತಿದ್ದು, ಇಲಾಖೆ ಹಾಗೂ ಏಜೆನ
ರಾಯಚೂರು : ವಿದ್ಯುನ್ಮಾನ ಮಾಪಕ ; ಸಹಕರಿಸುವಂತೆ ಮನವಿ


ರಾಯಚೂರು, 23 ಮೇ (ಹಿ.ಸ.) :

ಆ್ಯಂಕರ್ : ಜೆಸ್ಕಾಂ ಇಲಾಖೆಯಿಂದ ರಾಯಚೂರು ನಗರದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಎಲೆಕ್ಟ್ರೋ-ಮೆಕ್ಯಾನಿಕಲ್, ನೇರ ಸಂಪರ್ಕ ಹಾಗೂ ವಿದ್ಯುತ್ ಯುನಿಟ್‍ಗಳನ್ನು ದಾಖಲಿಸದ ವಿದ್ಯುತ್ ಸ್ಥಾವರಗಳಿಗೆ ಹೊಸ ವಿದ್ಯುನ್ಮಾನ ಮಾಪಕಗಳನ್ನು ಅಳವಡಿಸಲಾಗುತ್ತಿದ್ದು, ಇಲಾಖೆ ಹಾಗೂ ಏಜೆನ್ಸಿ ಸಿಬ್ಬಂದಿಗೆ ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಎಲೆಕ್ಟ್ರೋ-ಮೆಕ್ಯಾನಿಕಲ್, ನೇರ ಸಂಪರ್ಕ ಅಥವಾ ವಿದ್ಯುತ್ ಯುನಿಟ್‍ಗಳನ್ನು ದಾಖಲಿಸದ ವಿದ್ಯುತ್ ಸ್ಥಾವರಗಳಿಗೆ ಹೊಸ ವಿದ್ಯುನ್ಮಾನ ಮಾಪಕಗಳನ್ನು ಅಳವಡಿಸುವ ಸಲುವಾಗಿ ವಿ.ಆರ್.ಪಾಟೀಲ್ ವಿವಿಧ್ ವಿದ್ಯುತ್ ನಿರ್ಮಾಣ ಪ್ರೈ.ಲಿಮಿಟೆಡ್ ಅವರಿಗೆ ಜೆಸ್ಕಾಂ ಕಡೆಯಿಂದ ಗುತ್ತಿಗೆ ನೀಡಲಾಗಿದ್ದು, ಈ ವಿದ್ಯುತ್ ಮಾಪನಗಳನ್ನು ಬದಲಾಯಿಸುವ ಸಂದರ್ಭದಲ್ಲಿ ನಗರದ ವಿವಿಧೆಡೆ ಸಾರ್ವಜನಿಕರು ಅಡ್ಡಿಪಡಿಸಿರುವುದು ಕಂಡುಬಂದಿರುತ್ತದೆ

ಸಾರ್ವಜನಿಕರಿಗೆ ಉತ್ತಮ ವಿದ್ಯುತ್ ಸೌಲಭ್ಯ ಒದಗಿಸಲು ವಿದ್ಯುನ್ಮಾನ ಮಾಪಕಗಳ ಅವಶ್ಯವಿರುವಕಾರಣ ವಿ.ಆರ್ ಪಾಟೀಲ್ ವಿವಿಧ್ ವಿದ್ಯುತ್ ನಿರ್ಮಾಣ ಪ್ರೈ. ಲಿಮಿಟೆಡ್ ಅವರ ಸಿಬ್ಬಂದಿ ವಿದ್ಯುತ್ ಮಾಪಕಗಳನ್ನು ಬದಲಾಯಿಸುವಾಗ ರಾಯಚೂರು ನಗರದ ಗ್ರಾಹಕರು ಸಹಕರಿಸಬೇಕು.

ಸಾರ್ವಜನಿಕರಿಗೆ ವಿದ್ಯುತ್ ಮಾಪಕಗಳನ್ನು ಬದಲಾಯಿಸುವಾಗ ಯಾವುದೇ ಕುಂದು ಕೊರತೆ ಉಂಟಾದದಲ್ಲಿ ಸಂಬಂಧಪಟ್ಟ ಶಾಖಾಧಿಕಾರಿ ಅಥವಾ ಉಪವಿಭಾಗಾಧಿಕಾರಿಗಳನ್ನು ಸಂಪಂರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande