ದ್ವಿತೀಯ ಪಿಯುಸಿ ಪರೀಕ್ಷೆ-3 ನೋಂದಣಿ ಆರಂಭ – ಮೇ 28 ಕೊನೆಯ ದಿನಾಂಕ
ಶಿವಮೊಗ್ಗ, 22 ಮೇ (ಹಿ.ಸ.) : ಆ್ಯಂಕರ್ : ದ್ವಿತೀಯ ಪಿಯುಸಿ ಪರೀಕ್ಷೆ-3 ಜೂನ್ 9ರಿಂದ 20ರ ವರೆಗೆ ನಡೆಯಲಿದೆ. ಪರೀಕ್ಷೆಗೆ ನೋಂದಣಿಗೆ ಮೇ 28 ಕೊನೆಯ ದಿನವಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಪೂರ್ವ ಫಲಿತಾಂಶದಲ್ಲಿ ಅನೇಕರಿಗೆ ಅವಕಾಶ ದೊರೆತಿಲ್ಲದ ಹಿನ್ನೆಲೆಯಲ್ಲಿ
ದ್ವಿತೀಯ ಪಿಯುಸಿ ಪರೀಕ್ಷೆ-3 ನೋಂದಣಿ ಆರಂಭ – ಮೇ 28 ಕೊನೆಯ ದಿನಾಂಕ


ಶಿವಮೊಗ್ಗ, 22 ಮೇ (ಹಿ.ಸ.) :

ಆ್ಯಂಕರ್ : ದ್ವಿತೀಯ ಪಿಯುಸಿ ಪರೀಕ್ಷೆ-3 ಜೂನ್ 9ರಿಂದ 20ರ ವರೆಗೆ ನಡೆಯಲಿದೆ. ಪರೀಕ್ಷೆಗೆ ನೋಂದಣಿಗೆ ಮೇ 28 ಕೊನೆಯ ದಿನವಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಪೂರ್ವ ಫಲಿತಾಂಶದಲ್ಲಿ ಅನೇಕರಿಗೆ ಅವಕಾಶ ದೊರೆತಿಲ್ಲದ ಹಿನ್ನೆಲೆಯಲ್ಲಿ ಈ ಪರೀಕ್ಷೆ ಆಯೋಜನೆಗೊಂಡಿದ್ದು, ಫಲಿತಾಂಶ ಪೂರ್ಣಗೊಳ್ಳದ ಹಾಗೂ ಅನುತ್ತೀರ್ಣ ವಿದ್ಯಾರ್ಥಿಗಳು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಪುನರಾವರ್ತಿತ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆದಿಲ್ಲದವರಿಗೆ ಖಾಸಗಿ ಅಭ್ಯರ್ಥಿಯಾಗಿ ಅವಕಾಶ ಹಾಗೂ ಇಚ್ಛಿತ ವಿಷಯಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande