ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆ ವಾಹನಗಳ ಬಹಿರಂಗ ಹರಾಜು
ಶಿವಮೊಗ್ಗ, 22 ಮೇ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆ ವಶಪಡಿಸಿಕೊಂಡು ಸರ್ಕಾರದ ಮಾಲೀಕತ್ವಕ್ಕೆ ಹೊಂದಿರುವ ವಾಹನಗಳನ್ನು ಮೇ 26ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಅಬಕಾರಿ ಭವನ ಆವರಣದಲ್ಲಿ ಬಹಿರಂಗ ಹರಾಜು/ಟೆಂಡರ್ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್ಸ್ ತಿಳಿಸಿದ
ಶಿವಮೊಗ್ಗದಲ್ಲಿ ಅಬಕಾರಿ ಇಲಾಖೆ ವಾಹನಗಳ ಬಹಿರಂಗ ಹರಾಜು


ಶಿವಮೊಗ್ಗ, 22 ಮೇ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆ ವಶಪಡಿಸಿಕೊಂಡು ಸರ್ಕಾರದ ಮಾಲೀಕತ್ವಕ್ಕೆ ಹೊಂದಿರುವ ವಾಹನಗಳನ್ನು ಮೇ 26ರಂದು ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಅಬಕಾರಿ ಭವನ ಆವರಣದಲ್ಲಿ ಬಹಿರಂಗ ಹರಾಜು/ಟೆಂಡರ್ ಮೂಲಕ ಮಾರಾಟ ಮಾಡಲಾಗುತ್ತದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಸ್ಸ್ ತಿಳಿಸಿದ್ದಾರೆ.

ಹರಾಜಿಗೆ ಇಡಲಾಗಿರುವ ವಾಹನಗಳ ಪಟ್ಟಿ:

ಬಜಾಜ್ ಪಲ್ಸರ್ (ಕೆಎ-14-ಇಸಿ-7965)

ಟಿವಿಎಸ್ ಅಪಾಚಿ RTR 160 (ಕೆಎ-14-ಇಜಿ-5037)

ಟಿವಿಎಸ್ ಎಕ್ಸ್ಎಲ್ ಸೂಪರ್ ಹೆವಿ ಡ್ಯೂಟಿ (ಕೆಎ-14-ಇಡಿ-5883)

ಹೋಂಡಾ ಡಿಯೋ (ಕೆಎ-14-ಇಬಿ-2413)

ಹೀರೋ ಸ್ಪ್ಲೆಂಡರ್ ಪ್ಲಸ್ (ಕೆಎ-14-ಇಯು-1458)

ಬಜಾಜ್ ಪಲ್ಸರ್ (ಕೆಎ-14-ಇಎಕ್ಸ್-3876)

ಸಾರ್ವಜನಿಕರು ಹರಾಜಿಗೆ ಇಡಲಾದ ವಾಹನಗಳನ್ನು ಮೇ 26ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 5:30ರವರೆಗೆ ವೀಕ್ಷಿಸಬಹುದಾಗಿದೆ. ಸಂಬಂಧಿತ ಷರತ್ತುಗಳು ಅನ್ವಯವಾಗುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande