ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಅವಧಿ ವಿಸ್ತರಣೆ : ದಿವ್ಯ ಪ್ರಭು
ಧಾರವಾಡ, 22 ಮೇ (ಹಿ.ಸ.) : ಆ್ಯಂಕರ್ : 2024 ಮತ್ತು 2025 ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ, ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸುವಂತೆ ರಾಜ್ಯ ಸರಕಾರದಿಂದ ಸುತ್ತೋಲೆ ಹೊರಡಿಸಿ, ಏಪ್ರಿಲ್ 14 ಕೊನೆಯ ದಿನಾಂಕ ನೀಡಲಾಗಿತ್ತು. ಆದರೆ, ಇನ್ನೂ
ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ ಅವಧಿ ವಿಸ್ತರಣೆ : ದಿವ್ಯ ಪ್ರಭು


ಧಾರವಾಡ, 22 ಮೇ (ಹಿ.ಸ.) :

ಆ್ಯಂಕರ್ : 2024 ಮತ್ತು 2025 ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ನಾಮನಿರ್ದೇಶನ, ಅರ್ಜಿಯನ್ನು ಆನ್‍ಲೈನ್‍ನಲ್ಲಿ ಸಲ್ಲಿಸುವಂತೆ ರಾಜ್ಯ ಸರಕಾರದಿಂದ ಸುತ್ತೋಲೆ ಹೊರಡಿಸಿ, ಏಪ್ರಿಲ್ 14 ಕೊನೆಯ ದಿನಾಂಕ ನೀಡಲಾಗಿತ್ತು.

ಆದರೆ, ಇನ್ನೂ ಹೆಚ್ಚಿನ ಸಂಖ್ಯೆಯ ಅಧಿಕಾರಿ ಮತ್ತು ನೌಕರರಿಗೆ ರಾಜ್ಯ ಹಾಗೂ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ತಮ್ಮ ನಾಮನಿರ್ದೇಶನ, ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ, ಸರಕಾರದ ನಿರ್ದೇಶನದ ಮೇರೆಗೆ, ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಮೇ 31, 2025 ರವರೆಗೆ ವಿಸ್ತರಿಸಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande