ಸಿರಿಯಾ : ಭದ್ರತಾ ಪಡೆ- ಅಸ್ಸಾದ್ ಬೆಂಬಲಿಗರ ಸಂಘರ್ಷ
ಡಮಾಸ್ಕಸ್, 08 ಮಾರ್ಚ್ (ಹಿ.ಸ.) : ಆ್ಯಂಕರ್ : ಸಿರಿಯಾ ಮತ್ತೊಮ್ಮೆ ಅಂತರ್ಯುದ್ಧದ ಕಪಿಮುಷ್ಟಿಯಲ್ಲಿದೆ. ದೇಶದ ಹೊಸ ಆಡಳಿತ ಮತ್ತು ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಬೆಂಬಲಿಗರ ನಡುವೆ ಗುರುವಾರ ಪ್ರಾರಂಭವಾದ ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ. ಈ ಘರ್ಷಣೆಯಲ್ಲಿ ಇದುವರೆಗೆ ಸುಮಾರು 200 ಜನರು ಪ್ರಾಣ
Siriya


ಡಮಾಸ್ಕಸ್, 08 ಮಾರ್ಚ್ (ಹಿ.ಸ.) :

ಆ್ಯಂಕರ್ : ಸಿರಿಯಾ ಮತ್ತೊಮ್ಮೆ ಅಂತರ್ಯುದ್ಧದ ಕಪಿಮುಷ್ಟಿಯಲ್ಲಿದೆ. ದೇಶದ ಹೊಸ ಆಡಳಿತ ಮತ್ತು ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ಬೆಂಬಲಿಗರ ನಡುವೆ ಗುರುವಾರ ಪ್ರಾರಂಭವಾದ ರಕ್ತಸಿಕ್ತ ಸಂಘರ್ಷ ಮುಂದುವರೆದಿದೆ.

ಈ ಘರ್ಷಣೆಯಲ್ಲಿ ಇದುವರೆಗೆ ಸುಮಾರು 200 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಡಿಸೆಂಬರ್‌ನಲ್ಲಿ ಬಂಡುಕೋರರು ಅಸ್ಸಾದ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಸಿರಿಯಾದಲ್ಲಿ ನಡೆಯುತ್ತಿರುವ ಮೊದಲ ಹಿಂಸಾಚಾರ ಇದಾಗಿದೆ.

14 ವರ್ಷಗಳಿಂದ ಅಂತರ್ಯುದ್ಧದ ಬೆಂಕಿಯಲ್ಲಿ ಉರಿಯುತ್ತಿದ್ದ ಸಿರಿಯಾದಲ್ಲಿ ಶಾಂತಿ ನೆಲೆಸಿದ್ದಾಗ, ಇಸ್ಲಾಮಿಸ್ಟ್ ಗುಂಪು ಹಯಾತ್ ತಹ್ರಿರ್ ಅಲ್-ಶಾಮ್ ನೇತೃತ್ವದ ಬಂಡಾಯ ಗುಂಪು ಕಳೆದ ವರ್ಷ ದೇಶದಲ್ಲಿ ಅಧಿಕಾರವನ್ನು ವಶಪಡಿಸಿಕೊಂಡಿತು.

ಮಾಜಿ ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ದೇಶ ತೊರೆದು ರಷ್ಯಾದಲ್ಲಿ ಆಶ್ರಯ ಪಡೆದರು. ಆದಾಗ್ಯೂ, ಕೆಲವೇ ತಿಂಗಳುಗಳ ನಂತರ, ಗುರುವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿತು.

ಸನಾ ಸುದ್ದಿ ಸಂಸ್ಥೆಯ ಪ್ರಕಾರ, ಸರ್ಕಾರಿ ಭದ್ರತಾ ಪಡೆಗಳು ಕರಾವಳಿ ಪಟ್ಟಣವಾದ ಜಬ್ಲೆಹ್ ಬಳಿ ವ್ಯಕ್ತಿಯೋರ್ವನು ಬಂಧಿಸಲು ಪ್ರಯತ್ನಿಸಿದಾಗ ಅಸ್ಸಾದ್ ಬೆಂಬಲಿಗರು ಪ್ರತಿಭಟಿಸಿ ಭದ್ರತಾ ಪಡೆಗಳ ಮೇಲೆ ದಾಳಿ ಮಾಡಿದರು. ಅಂದಿನಿಂದ, ಭದ್ರತಾ ಪಡೆಗಳು ಮಾಜಿ ಅಧ್ಯಕ್ಷ ಅಸ್ಸಾದ್ ಬೆಂಬಲಿಗರ ಮೇಲೆ ದಾಳಿ ಮಾಡುತ್ತಿವೆ.

ಭದ್ರತಾ ಪಡೆಗಳ ಈ ಕಾರ್ಯಾಚರಣೆ ವಿಶೇಷವಾಗಿ ಅಸ್ಸಾದ್ ಬೆಂಬಲಿಗರು ಮತ್ತು ಅವರ ಕುಟುಂಬವು ತಮ್ಮ ಪ್ರಬಲ ನೆಲೆಯನ್ನು ಹೊಂದಿರುವ ಪ್ರದೇಶಗಳಲ್ಲಿ ನಡೆಯುತ್ತಿದೆ.

ಸಿರಿಯಾದ ಕರಾವಳಿ ಪ್ರಾಂತ್ಯವಾದ ಲಟಾಕಿಯಾದಲ್ಲಿ ಭದ್ರತಾ ಪಡೆಗಳು ಮತ್ತು ಬಂದೂಕುಧಾರಿಗಳ ನಡುವೆ ಇದೇ ರೀತಿಯ ರಕ್ತಸಿಕ್ತ ಘರ್ಷಣೆ ನಡೆದು 70 ಜನರು ಸಾವನ್ನಪ್ಪಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande