ಗಂಗಾವತಿ (ಕೊಪ್ಪಳ), 08 ಮಾರ್ಚ್ (ಹಿ.ಸ.):
ಆ್ಯಂಕರ್ : ಗಂಗಾವತಿ ತಾಲೂಕಿನ ಸಣಾಪುರದ ಬಳಿ ಇಬ್ಬರು ವಿದೇಶೀ ಮಹಿಳೆಯರ (ಇಸ್ರೇಲ್ ದೇಶದ ಒಬ್ಬರು, ಸ್ಥಳೀಯ ಒಬ್ಬರು) ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಹಾಗೂ ಒಬ್ಬನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಿರುವುದಾಗಿ ಜಿಲ್ಲಾ ಎಸ್ಪಿ ರಾಂ. ಎಲ್ ಅರಸಿದ್ಧಿ ಅವರು ತಿಳಿಸಿದ್ದಾರೆ.
ಶನಿವಾರ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಸಾಯಿನಗರದ ಗೌಂಡಿ ಕೆಲಸ ಮಾಡುವ ಮಲ್ಲೇಶ ಅಲಿಯಾಸ್ ಹಂದಿ ಮಲ್ಲೇಶ ಅಯ್ಯಪ್ಪ ದಾಸರ (22) ಹಾಗೂ ಮಿಷನ್ ಕೆಲಸ ಮಾಡುವ ಚೇತನಸಾಯಿ ಕಾಮೇಶ್ವರ ರಾವ್ (21) ಎಂಬ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿಯ ಹುಡುಕಾಟ ನಡೆದಿದೆ ಎಂದರು.
ಶವ ಪತ್ತೆ: ತುಂಗಭದ್ರಾ ಎಡದಂಡೆ ಕಾಲುವೆಗೆ ಬಂಧಿತ ಆರೋಪಿಗಳಿಂದ ತಳ್ಳಲ್ಪಟ್ಟ ಮೂವರು ಪ್ರವಾಸಿಗರಲ್ಲಿ ಅಮೆರಿಕದ ಡೇನಿಯಲ್ ಹಾಗೂ ಮಹಾರಾಷ್ಟ್ರದ ಪಂಕಜ್ ಎಂಬವರು ಈಜಿ ದಡ ಸೇರಿದ್ದರು. ಆದರೆ ಒಡಿಶಾದ ಬಿಬಾಸ್ (42) ಎಂಬವರು ಕಾಲುವೆಯಲ್ಲಿ ಕೊಚ್ಚಿಹೋಗಿದ್ದು, ಶನಿವಾರ ಬೆಳಗ್ಗೆ ಅವರ ಶವ ಪತ್ತೆಯಾಗಿದೆ.
ಬಂಧಿತ ಆರೋಪಿಗಳು ಸಣಾಪುರ ಸಮೀಪದ ಬಾರ್ ಒಂದರಲ್ಲಿ ಮದ್ಯ ಸೇವಿಸಿಬ ಬೈಕ್ ನಲ್ಲಿ ಸುತ್ತಾಡುವಾಗ ಇಬ್ಬರು ವಿದೇಶಿಗರು, ಇಬ್ಬರು ಹೊರ ರಾಜ್ಯದ ಪ್ರವಾಸಿಗರು ಸೇರಿದಂತೆ ಸ್ಥಳೀಯ ಒಬ್ಬ ಮಹಿಳೆಯರನ್ನೊಳಗೊಂಡ ತಂಡ ಎದುರಾಗಿದೆ.
ಪ್ರವಾಸಿಗರಿಂದ ಹಣಕ್ಕೆ ಬೇಡಿಕೆ ಇಟ್ಟ ಆರೋಪಿಗಳು ಮಾತಿಗೆ ಮಾತು ಬೆಳೆದಿದೆ. ಆರೋಪಿಗಳು ಮತ್ತು ಪ್ರವಾಸಿಗರ ತಂಡದ ಜೊತೆ ಮಾತಿನ ಚಕಮಕಿ ನಡೆದು ಇಸ್ರೇಲ್ ಹಾಗೂ ಮಹಾರಾಷ್ಟದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಅವರು ವಿಚರಿಸಿದರು.
ಸುದ್ದಿಗೋಷ್ಠಿಯ ವೇಳೆ ಹೆಚ್ಚುವರಿ ಎಸ್ಪಿ ಹೇಮಂತಕುಮಾರ್, ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಸೇರಿದಂತೆ ಇತರರಿದ್ದರು.
ಗುರುವಾರ ಮಧ್ಯರಾತ್ರಿ ಸಾಣಾಪುರ ರಂಗಾಪುರ ಜಂಗ್ಲಿ ಮದ್ಯೆ ಇರುವ ಗಂಗಮ್ಮನ ಗುಡಿ ಹತ್ತಿರ ಐದು ಜನ ವಿದೇಶಿ ಮತ್ತು ದೇಶೀ ಪ್ರವಾಸಿಗರು ಕುಳಿತಿರುವ ಜಾಗಕ್ಕೆ ಮೂವರು ಹೋಗಿ, ದೌರ್ಜನ್ಯ ನಡೆಸಿದ್ಧಾರೆ.
ಈ ಸಂದರ್ಭದಲ್ಲಿ ಅಮೆರಿಕಾದ ಡ್ಯಾನಿಯೇಲ್, ನಾಸಿಕ್ ನ ಪಂಕಜ್ ಹಾಗೂ ಒರಿಸ್ಸಾ ಮೂಲದ ಡಿಬಾಸ್ ಅವರು ಜಗಳ ಬಿಡಿಸಲು ಪ್ರಯತ್ನಿಸಿದಾಗ
ಆರೋಪಗಳು ಪ್ರವಾಸಿಗರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕಾಲುವೆಗೆ ತಳ್ಳಿದ್ದರು.
ಕಾಲುವಗೆ ನೂಕಲ್ಪಟ್ಟಿದ್ದ ಡ್ಯಾನಿಯೇಲ್ ಮತ್ತು ಪಂಕಜ್ ಈಜಿ, ಕಾಲುವೆಯಿಂದ ಮೇಲೆಕ್ಕೆ ಬಂದು, ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಡಿಬಾಸ ಅಬರು ನಾಪತ್ತೆಯಾಗಿದ್ದರು.
ಈ ಘಟನೆ ರಾಜ್ಯ, ದೇಶ ಹಾಗೂ ವಿದೇಶಿ ಮಾಧ್ಯಮಗಳು - ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆದಯ, ಅಂತಾರಾಷ್ಟ್ರೀಯ ರಾಯಭಾರ ಕಚೇರಿಗಳಿಂದ ಕೇಂದ್ರ ಸರ್ಕಾರದ ಗಮನ ಸೆಳೆಯಲಾಯಿತು.
ಗುರುವಾರ ಮಧ್ಯರಾತ್ರಿಯಿಂದಲೇ ಹಿರಿಯ ಪೊಲೀಸರು ಗಂಗಾವತಿಯಲ್ಲಿ ಬೀಡು ಬಿಟ್ಟು ಪ್ರಕರಣದ ಪರಿಶೀಲನೆ ನಡೆಸಿ, ಇಬ್ನರು ಆರೋಪಗಳನ್ನು ಬಂಧಿಸುವಲ್ಕಿ ಯಶಸ್ವಿಯಾಗಿದ್ದಾರೆ.
ಗಾಯಾಳುಗಳನ್ನು ಎಸ್ಪಿ ಡಾ.ರಾಂ ಎಲ್.ಅರಸಿದ್ದು ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಾಮರ್ಶೆ ಮಾಡಿ, ಹಿರಿಯ ಅಧಿಕಾರುಗಳಿಗೆ ವರದಿ ನೀಡಿದ್ದಾರೆ. ಗಾಯಾಳುಗಳಿಗೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೆ ವ್ಯವಸ್ಥೆ ಮಾಡಲಾಗಿದೆ.
ಪರಾರಿಯಾಗಿರುವ ಆರೋಪಿಯ ಬಂಧನಕ್ಕೆ ಎರಡು ವಿಶೇಷ ತನಿಖಾ ತಂಡಗಳು ಆನೆಗೊಂದಿ, ಜಂಗ್ಲಿ, ಸಾಣಾಪೂರ, ಹನುಮನಹಳ್ಳಿ ಇನ್ನಿತರೆಡೆ ತನಿಖೆ ಚುರುಕುಗೊಳಿಸಿವೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್