ನೇಪಾಳ ಮಾಜಿ‌ ರಾಜ ಜ್ಞಾನೇಂದ್ರ ಶಾ ನಡೆಗೆ ಖಂಡನೆ
ಕಠ್ಮಂಡು, 10 ಮಾರ್ಚ್ (ಹಿ.ಸ.) : ಆ್ಯಂಕರ್ : ನೇಪಾಳದ ಕಠ್ಮಂಡುವಿನಲ್ಲಿ ಮಾಜಿ ರಾಜ ಜ್ಞಾನೇಂದ್ರ ಶಾ ಅವರನ್ನು ಬೆಂಬಲಿಸಿ ಭಾರಿ ಜನಸಮೂಹ ಜಮಾಯಿಸಿದ ನಂತರ ನೇಪಾಳ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ. ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಮಾಜಿ ರಾಜನ ನಡೆ ವಿರೋಧಿಸಿದ್ದಾರೆ ಮತ್ತು ತಮ್ಮ ಮಿತಿಯೊಳಗೆ
Nepal


ಕಠ್ಮಂಡು, 10 ಮಾರ್ಚ್ (ಹಿ.ಸ.) :

ಆ್ಯಂಕರ್ : ನೇಪಾಳದ ಕಠ್ಮಂಡುವಿನಲ್ಲಿ ಮಾಜಿ ರಾಜ ಜ್ಞಾನೇಂದ್ರ ಶಾ ಅವರನ್ನು ಬೆಂಬಲಿಸಿ ಭಾರಿ ಜನಸಮೂಹ ಜಮಾಯಿಸಿದ ನಂತರ ನೇಪಾಳ ರಾಜಕೀಯದಲ್ಲಿ ಕೋಲಾಹಲ ಉಂಟಾಗಿದೆ.

ನೇಪಾಳದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು, ಮಾಜಿ ರಾಜನ ನಡೆ ವಿರೋಧಿಸಿದ್ದಾರೆ ಮತ್ತು ತಮ್ಮ ಮಿತಿಯೊಳಗೆ ಇರಬೇಕು, ಪ್ರಜಾಪ್ರಭುತ್ವದ ವಿರುದ್ಧ ಕೆಲಸ ಮಾಡಬೇಡಿ ಮತ್ತು ಸಾರ್ವಜನಿಕರನ್ನು ಕೆರಳಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಭಾನುವಾರ, ಲಕ್ಷಾಂತರ ಜನರು ಕಠ್ಮಂಡು ವಿಮಾನ ನಿಲ್ದಾಣದಿಂದ ಅವರ ನಿವಾಸದವರೆಗೆ ಬೀದಿಗಿಳಿದು ಮಾಜಿ ರಾಜನ ಪರವಾಗಿ ಘೋಷಣೆಗಳನ್ನು ಹಾಕಿದರು.

ಇದಕ್ಕೆ ಪ್ರಮುಖ ಪಕ್ಷಗಳ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ನೇಪಾಳಿ ಕಾಂಗ್ರೆಸ್ ನಾಯಕ ಮತ್ತು ಗೃಹ ಸಚಿವ ರಮೇಶ್ ಲೇಖಕ್ ಅವರು ಮಾಜಿ ರಾಜನಿಗೆ ಎಚ್ಚರಿಕೆ ನೀಡಿದ್ದು, ತಮ್ಮ ಮಿತಿಯೊಳಗೆ ಇರುವಂತೆ ಸಲಹೆ ನೀಡಿದ್ದಾರೆ.

ಮಾಜಿ ರಾಜ ಪ್ರಸ್ತುತ ವ್ಯವಸ್ಥೆಯನ್ನು ಒಪ್ಪಿಕೊಳ್ಳದಿದ್ದರೆ, ರಾಜ್ಯವು ಅವರಿಗೆ ಒದಗಿಸುತ್ತಿರುವ ಭದ್ರತೆ ಮತ್ತು ಇತರ ಸೌಲಭ್ಯಗಳನ್ನು ಹಿಂಪಡೆಯಲಾಗುವುದು ಎಂದು ಅವರು ಹೇಳಿದ್ದಾರೆ.

ಮಾಜಿ ರಾಜನ ಚಟುವಟಿಕೆಗಳು ಸಂವಿಧಾನ ಮತ್ತು ಕಾನೂನಿಗೆ ವಿರುದ್ಧವಾಗಿವೆ ಎಂದು ಗೃಹ ಸಚಿವರು ಹೇಳಿದ್ದು ಅಂತಹ ಚಟುವಟಿಕೆಗಳಿಂದಾಗಿ ಅವರನ್ನು ಕಾನೂನಿನ ವ್ಯಾಪ್ತಿಯೊಳಗೆ ತರಬಹುದು ಎಂದಿದ್ದಾರೆ.

ಆಡಳಿತಾರೂಢ ಸಿಪಿಎನ್-ಯುಎಂಎಲ್ ಪಕ್ಷವು ಮಾಜಿ ರಾಜನ ಕಡೆಗೆ ಜನರ ಆಕರ್ಷಣೆ ಹೆಚ್ಚುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ಪಕ್ಷದ ಪ್ರಧಾನ ಕಾರ್ಯದರ್ಶಿ ಶಂಕರ್ ಪೋಖ್ರೆಲ್ ಮಾತನಾಡಿ, ಜ್ಞಾನೇಂದ್ರ ಶಾ ಮತ್ತೆ ಅಧಿಕಾರಕ್ಕೆ ಬರಲು ಬಯಸಿದರೆ ರಾಜಕೀಯ ಪ್ರವೇಶಿಸುವ ಸ್ವಾತಂತ್ರ್ಯವಿದೆ. ಆದರೆ ಈ ರೀತಿ ಸಮಾಜದಲ್ಲಿ ಅಸ್ಥಿರತೆಯನ್ನು ಹರಡುವ ಮೂಲಕ ಮತ್ತೆ ಅಧಿಕಾರಕ್ಕೆ ಬರುವ ಕನಸನ್ನು ಕೈಬಿಡುವಂತೆ ಅವರು ಸೂಚಿಸಿದ್ದಾರೆ ಮತ್ತು ತಮ್ಮದೇ ಆದ ಪಕ್ಷವನ್ನು ರಚಿಸುವಂತೆ ಸವಾಲು ಹಾಕಿದ್ದಾರೆ.

ಈ ಸಂವಿಧಾನದಲ್ಲಿ ರಾಜಪ್ರಭುತ್ವಕ್ಕೆ ಸ್ಥಾನವಿಲ್ಲ ಎಂದು ಪೋಖ್ರೆಲ್ ಹೇಳಿದ್ದು. ಮಾಜಿ ರಾಜ ದೇಶದಲ್ಲಿ ರಾಜಪ್ರಭುತ್ವವನ್ನು ಪುನಃಸ್ಥಾಪಿಸಲು ಬಯಸಿದರೆ, ಅವರು ರಾಜಕೀಯ ಪ್ರವೇಶಿಸಬೇಕು, ಚುನಾವಣೆಗಳಲ್ಲಿ ಸ್ಪರ್ಧಿಸಬೇಕು ಮತ್ತು ಮೂರನೇ ಎರಡರಷ್ಟು ಬಹುಮತವನ್ನು ಪಡೆಯುವ ಮೂಲಕ, ಅವರು ತಮ್ಮ ಇಚ್ಛೆಯಂತೆ ಸಂವಿಧಾನದಲ್ಲಿ ಬದಲಾವಣೆಗಳನ್ನು ಮಾಡಬಹುದು ಎಂದಿರುವ ಅವರು ಕೂಡಲೇ ತಮ್ಮ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande