ಬೆಳಗಾವಿ ಲಾಟಿ ಪ್ರಹಾರ ಖಂಡಿಸಿ ಡಿ. 10ಕ್ಕೆ ಮೌನ ಮೆರವಣಿಗೆ
ಕೊಪ್ಪಳ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕಳೆದ ವರ್ಷ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ನಡೆಸಿದ್ದ ಲಾಠಿ ಪ್ರಹಾರ ಖಂಡಿಸಿ ಡಿ. 10ರಂದು ಬಾಯಿ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಹಾಗೂ ಒಂದು ದಿನದ ಮೌನ ಪ್ರತಿಭಟನೆ ಮ
ಬೆಳಗಾವಿ ಲಾಟಿ ಪ್ರಹಾರ ಖಂಡಿಸಿ ಡಿ. 10ಕ್ಕೆ ಮೌನ ಮೆರವಣಿಗೆ


ಬೆಳಗಾವಿ ಲಾಟಿ ಪ್ರಹಾರ ಖಂಡಿಸಿ ಡಿ. 10ಕ್ಕೆ ಮೌನ ಮೆರವಣಿಗೆ


ಕೊಪ್ಪಳ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕಳೆದ ವರ್ಷ ಲಿಂಗಾಯತ ಪಂಚಮಸಾಲಿ ಮೀಸಲಾತಿ ಹೋರಾಟದ ಮೇಲೆ ನಡೆಸಿದ್ದ ಲಾಠಿ ಪ್ರಹಾರ ಖಂಡಿಸಿ ಡಿ. 10ರಂದು ಬಾಯಿ ಮತ್ತು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಮೌನ ಮೆರವಣಿಗೆ ಹಾಗೂ ಒಂದು ದಿನದ ಮೌನ ಪ್ರತಿಭಟನೆ ಮಾಡಲಾಗುವುದು ಎಂದು ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.

ಅವರು ಇಂದು ನಗರದ ಲಿಂಗಾಯತ ಪಂಚಮಸಾಲಿ ಸಮುದಾಯ ಭವನದಲ್ಲಿ ನಡೆದ ಲಾಟಿ ಪ್ರಹಾರ ಖಂಡಿಸಿ ಮೌನ ಮೆರವಣಿಗೆಯ ಪೂರ್ವಭಾವಿ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಪ್ರತಿ ವರ್ಷ ಡಿ. 10ನ್ನು ಲಿಂಗಾಯತರ ಮೇಲಿನ ದೌರ್ಜನ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿದ್ದೇವೆ ಮೊದಲ ಆಚರಣೆ ಡಿ. 10ರಂದು ಬೆಳಗಾವಿಯಲ್ಲಿ ಆಯೋಜಿಸಿದ್ದೇವೆ ಬೆಳಗಾವಿ ನಗರದ ಗಾಂಧಿ ಭವನದಿಂದ ಮೌನ ಮೆರವಣಿಗೆ ಆರಂಭಿಸುತ್ತೇವೆ ಜಿಲ್ಲಾಧಿಕಾರಿ ಅನುಮತಿ ಕೊಡುವ ಸ್ಥಳದವರಿಗೆ ತೆರಳಿ ಅಲ್ಲಿ ಒಂದು ದಿನದ ಮೌನ ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದರು.

ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಆಗಮಿಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪಂಚ ಸೇನಾ ರಾಜ್ಯ ಅಧ್ಯಕ್ಷರಾದ ರುದ್ರಗೌಡ ಸೊಲಬಗೌಡ್ರ, ಕೊಪ್ಪಳ ಜಿಲ್ಲಾ ಪಂಚ ಸೇನಾ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಮಂಗಳೇಶಪ್ಪ ಮರಿಬಸಪ್ಪನವರ ಮಂಗಳೂರು, ಬಸವಲಿಂಗಪ್ಪ ಭೂತೆ ಮಾಜಿ ಜಿಲ್ಲಾ ಅಧ್ಯಕ್ಷರು ಪಂಚಮಸಾಲಿ ಸಮಾಜ,ರವೀಂದ್ರನಾಥ ಕೊಟ್ರಪ್ಪ ತೋಟದ ರಾಜ್ಯ ಪಂಚ ಸೇನಾ ಮಾಧ್ಯಮ ವಕ್ತಾರರು, ಶಿವಶರಣಪ್ಪ ಶಿವಪೂಜಿ ರಾಜ್ಯ ಕಾರ್ಯಕಾರಣಿ ಸದಸ್ಯರು ಪಂಚಸೇನಾ, ಬಸನಗೌಡ್ರ ತೊಂಡಿಹಾಳ ಜಿಲ್ಲಾ ಅಧ್ಯಕ್ಷರು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಕರಿಯಪ್ಪ ಮೇಟಿ ಕೊಪ್ಪಳ ತಾಲೂಕ ಅಧ್ಯಕ್ಷರು ಪಂಚಮಸಾಲಿ ಸಮಾಜ, ವೀರಣ್ಣ ಹುಬ್ಬಳ್ಳಿ ಜಿಲ್ಲಾ ಉಪಾಧ್ಯಕ್ಷರು ಪಂಚಮಸಾಲಿ ಸಮಾಜ, ವೀರಣ್ಣ ಅಣ್ಣಿಗೇರಿ ಕುಕನೂರು ತಾಲೂಕ ಅಧ್ಯಕ್ಷರು ಪಂಚಮಸಾಲಿ ಸಮಾಜ, ಸುರೇಶಗೌಡ್ರ ಶಿವನಗೌಡ್ರ ಯಲಬುರ್ಗಾ ಸಮಾಜದ ಮುಖಂಡರು, ಎಂಟು ತಾಲೂಕಿನ ಪಂಚಸೇನಾ ಅಧ್ಯಕ್ಷರು, ಜಿಲ್ಲೆಯ ಪಂಚಮಸಾಲಿ ಸಮಾಜ ಬಾಂಧವರು ಈ ಸಂದರ್ಭದಲ್ಲಿ ಹಾಜರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande