
ಹೊಸಪೇಟೆ, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಜಿಲ್ಲಾಧಿಕಾರಿ ಕಾರ್ಯಾಲಯ ಆವರಣ, ಎಸ್‌ಪಿ ಕಚೇರಿ ಹಿಂಭಾಗ, ಅನೇಕ್ಸ್ ಕಟ್ಟಡದ 6,8,9 ಮತ್ತು 10 ರ ಕೊಠಡಿ ಸಂಖ್ಯೆಯಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಯನ್ನು ಸ್ಥಳಾಂತರಿಸಲಾಗಿದೆ.
ಈ ಇಲಾಖೆಗೆ ಸಂಬಂಧಿಸಿದ ವೈಯಕ್ತಿಕ ಗಮನ ಸೆಳೆಯುವ ಹಾಗೂ ಗೌಪ್ಯ ವಿಷಯಗಳಿಗೆ ಮತ್ತು ಸರ್ಕಾರಿ ಹಾಗೂ ಅರೆಸರ್ಕಾರಿ ಪತ್ರಗಳನ್ನು ಅನೇಕ್ಸ್ ಕಟ್ಟಡ ವಿಳಾಸಕ್ಕೆ ನೀಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜಿ.ಶಶಿಕಲಾ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್