ಕೊಪ್ಪಳ ನಗರಸಭೆ : ನಾಯಿಗಳ ದತ್ತು ಅವಕಾಶ
ಕೊಪ್ಪಳ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ನಗರಸಭೆಯ ಪ್ರಾಣಿ ಆರೈಕೆ ಕೇಂದ್ರದಲ್ಲಿ ರಕ್ಷಿಸಲ್ಪಟ್ಟ ನಾಯಿಗಳನ್ನು ಸುರಕ್ಷಿತವಾಗಿ ವಸತಿಗೊಳಿಸಲಾದೆ ಇವುಗಳು ಆರೋಗ್ಯವಾಗಿದ್ದು, ಲಸಿಕೆ ಹಾಕಲಾಗಿದೆ ಇಚ್ಚೆಯುಳ್ಳ ನಾಗರಿಕರು ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ದತ್ತ
ಕೊಪ್ಪಳ ನಗರಸಭೆ : ನಾಯಿಗಳ ದತ್ತು ಅವಕಾಶ


ಕೊಪ್ಪಳ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ನಗರಸಭೆಯ ಪ್ರಾಣಿ ಆರೈಕೆ ಕೇಂದ್ರದಲ್ಲಿ ರಕ್ಷಿಸಲ್ಪಟ್ಟ ನಾಯಿಗಳನ್ನು ಸುರಕ್ಷಿತವಾಗಿ ವಸತಿಗೊಳಿಸಲಾದೆ ಇವುಗಳು ಆರೋಗ್ಯವಾಗಿದ್ದು, ಲಸಿಕೆ ಹಾಕಲಾಗಿದೆ

ಇಚ್ಚೆಯುಳ್ಳ ನಾಗರಿಕರು ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಆರೈಕೆ ಕೇಂದ್ರದಲ್ಲಿನ ನಾಯಿಗಳನ್ನು ದತ್ತು ಪಡೆಯಲು ಇಚ್ಚಿಸುವ ನಾಗರಿಕರು ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ಪ್ರಾಣಿ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ಲಭ್ಯವಿರುವ ನಾಯಿಗಳನ್ನು ಪರಿಶೀಲಿಸಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಆಸಕ್ತರು ನಗರದ ಪ್ರಾಣಿ ಆರೈಕೆ ಕೇಂದ್ರಕ್ಕೆ ಬೆಳಿಗ್ಗೆ 10 ಗಂಟೆಯಿ0ದ ಸಂಜೆ 5 ಗಂಟೆಯವರೆಗೆ ಭೇಟಿ ನೀಡಬಹುದು. ದತ್ತು ವಿಷಯಕ್ಕೆ ಸಂಬ0ಧಿಸಿದ0ತೆ ನಗರಸಭೆಯ ಆರೋಗ್ಯ ನಿರೀಕ್ಷಕರನ್ನು ಅಥವಾ ದೂ.ಸಂ: 08539-230192 ಗೆ ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande