ಗಂಡು ಮಗುಗೆ ಜನ್ಮ ನೀಡಲು ಗೃಹಿಣಿಗೆ ಚಿತ್ರಹಿಂಸೆ ; ನೆತ್ತಿಯ ಕೂದಲು ತೆಗೆದು ಹಿಂಸೆ
ವಿಜಯಪುರ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮೂರು ಹೆಣ್ಣು ಮಗು ಹೆತ್ತ ಗೃಹಿಣಿ ಗಂಡು ಮಗು ಹೆರಲಿಲ್ಲ ಎಂದು ನೆತ್ತಿಯ ಕೂದಲು ಕತ್ತರಿಸಿದ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ತಾಲೂಕಿನ ಆಹೇರಿ ಗ್ರಾಮದ ಜ್ಯೋತಿಯನ್ನು ಹೊನ್ನುಟಗಿ ಗ್ರಾಮದ ದುಂಡೇಶ ದಳವಾಯಿ ಎಂಬಾತನಿಗೆ 8 ವರ್ಷದ ಹಿಂ
ಗಂಡು


ವಿಜಯಪುರ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮೂರು ಹೆಣ್ಣು ಮಗು ಹೆತ್ತ ಗೃಹಿಣಿ ಗಂಡು ಮಗು ಹೆರಲಿಲ್ಲ ಎಂದು ನೆತ್ತಿಯ ಕೂದಲು ಕತ್ತರಿಸಿದ ಅಮಾನವೀಯ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ಆಹೇರಿ ಗ್ರಾಮದ ಜ್ಯೋತಿಯನ್ನು ಹೊನ್ನುಟಗಿ ಗ್ರಾಮದ ದುಂಡೇಶ ದಳವಾಯಿ ಎಂಬಾತನಿಗೆ 8 ವರ್ಷದ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ಜ್ಯೋತಿ ಹಾಗೂ ದುಂಡೇಶಗೆ ಸದ್ಯ ಮೂವರು ಹೆಣ್ಣುಮಕ್ಕಳಿದ್ದು, ಗಂಡು ಮಗು ಆಗಿಲ್ಲ ಅಂತಾ ಜ್ಯೋತಿಗೆ ನಾನಾ ಕಿರುಕುಳ ಕೊಡುತ್ತಿದ್ದರಂತೆ. ಇದೀಗ ಅದು ಅತೀರಾಕಾಗಿ ನಾಲ್ಕನೆ ಮಗು ಗಂಡಾಗಬೇಕು ಅಂತಾ ಜ್ಯೋತಿನಾ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮುಳವಾಡ ಗ್ರಾಮದ

ಮಾಟಗಾರ್ತಿ ಮಂಗಳಾ ಬಳಿ ಗಂಡ, ಮಾವ, ಅತ್ತೆ ಕರೆದುಕೊಂಡು ಹೋಗಿದ್ದಾರೆ.

ಆಗ ಮಾಟಗಾರ್ತಿ ಮಂಗಳ ಜ್ಯೋತಿಗೆ ದೆವ್ವ ಬಡೆದುಕೊಂಡಿದೆ. ಅದನ್ನು ಬಿಡಿಸಿದ್ರೆ ಗಂಡು ಮಗು ಆಗುತ್ತೆ ಅಂತಾ ಹೇಳಿ ಜ್ಯೋತಿಗೆ ತಲೆ ಕೂದಲು ಕೊಡಲು ಗಂಡ, ಅತ್ತೆ, ಮಾವ, ಮಂಗಾಳಾ ಒತ್ತಾಯಿಸಿದ್ದಾರೆ.

ಅದಕ್ಕೆ ಒಪ್ಪದ ಕಾರಣ ಜ್ಯೋತಿಗೆ ಹೊಡೆದು ಬಡೆದು ಚಿತ್ರಹಿಂಸೆ ನೀಡಿದ್ದಾರೆ. ನಂತರ ಮನೆಗೆ ಕರೆತಂದು ರಕ್ತಬರುವ ಹಾಗೆ ಜ್ಯೋತಿಗೆ ಒಡೆದು, ನೆತ್ತಿ ಮೇಲಿನ ಕೂದಲನ್ನು ಅತ್ತೆ, ಮಾವ, ಗಂಡ ಸೇರಿ ಕತ್ತರಿಸಿದ್ದಾರೆ. ನಂತರ ಮಾತಗಾರ್ತಿ ಮಂಗಳಾ ಹೇಳಿದಂತೆ ಸ್ಮಶಾನಕ್ಕೆ ಹೋಗಿ ಕೂದಲ್ಲನ್ನು ಸುಟ್ಟು ಬಂದಿದ್ದಾರೆ‌.

ಇದರಿಂದ ಭಯಭೀತ ಆಗಿರುವ ಜ್ಯೋತಿಯನ್ನು ತವರು ಮನೆಗೆ ತಾಯಿ ಪಾರ್ವತಿ ಕರೆ ತಂದಿದ್ದಾರೆ‌.

ಈ ಅಮಾನವೀಯ ಘಟನೆಯ ಬಗ್ಗೆ ನೊಂದ ಜ್ಯೋತಿ ಗಂಡ ದುಂಡೇಶ, ಮಾವ ಬಸಪ್ಪ, ಅತ್ತೆ ಸತ್ಯವ್ವ ಹಾಗೂ ಮಾತಗಾರ್ತಿ ಮಂಗಳಾ ಮೇಲೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಡಿಸೆಂಬರ್ 1 ರಂದು ದೂರು ದಾಖಲಿಸಿದ್ದಾಳೆ. ಆದ್ರೆ ಪೊಲೀಸರು ಇದುವರೆಗೂ ಯಾವುದೆ ಕ್ರಮ ಜರುಗಿಸಿಲ್ಲ ಅಂತಾ ಜ್ಯೋತಿ ಕಣ್ಣೀರಿಟ್ಟು ಹಿಡಿ ಶಾಪ ಹಾಕುತ್ತಿದ್ದಾಳೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande