ಮೀನುಗಾರಿಕೆ ಇಲಾಖೆ ಸಹಾಯಧನ
ಹರಪನಹಳ್ಳಿ, 08 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹರಪನಹಳ್ಳಿ ಮೀನುಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಫಲಾನುಭವಿಗಳ ಆಧಾರಿತ ಕಾರ್ಯಕ್ರಮದ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹರ
ಮೀನುಗಾರಿಕೆ ಇಲಾಖೆ ಸಹಾಯಧನ


ಹರಪನಹಳ್ಳಿ, 08 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹರಪನಹಳ್ಳಿ ಮೀನುಗಾರಿಕೆ ಇಲಾಖೆಯ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಧರ್ತಿ ಆಭಾ ಜನ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನದಡಿ ಫಲಾನುಭವಿಗಳ ಆಧಾರಿತ ಕಾರ್ಯಕ್ರಮದ ಘಟಕಗಳಿಗೆ ಸಹಾಯಧನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಹರಪನಹಳ್ಳಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಮೀನು ಮಾರಾಟಕ್ಕಾಗಿ ಐಸ್ ಬಾಕ್ಸ್ ನೊಂದಿಗೆ ದ್ವಿಚಕ್ರ ವಾಹನ, ಐಸ್ ಬಾಕ್ಸ್ ನೊಂದಿಗೆ ತ್ರಿಚಕ್ರವಾಹನ ಮತ್ತು ಜೀವಂತ ಮೀನು ಮಾರಾಟ ಕೇಂದ್ರಗಳನ್ನು ಘಟಕ ವೆಚ್ಚದಂತೆ ಸ್ಥಾಪಿಸಲು ಬುಡಕಟ್ಟು ಸಮುದಾಯದ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಘಟಕ ವೆಚ್ಚದ ಶೇ.90 ಸಹಾಯಧನವನ್ನು ನೀಡಲಾಗುತ್ತದೆ. ಹರಪನಹಳ್ಳಿ ತಾಲೂಕಿನ ಕೂಮರನಹಳ್ಳಿ, ಅನಂತನಹಳ್ಳಿ, ಕಂಭಟ್ರಳ್ಳಿ ಮತ್ತು ನಿಚ್ಚವ್ವನಹಳ್ಳಿ ಗ್ರಾಮದ ಬುಡಕಟ್ಟು ಸಮುದಾಯದ ಪರಿಶಿಷ್ಟ ಪಂಗಡ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿ.15 ರಂದು ಕೊನೆಯ ದಿನವಾಗಿದ್ದು, ಅವಧಿ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸುವುದಿಲ್ಲ. ಅರ್ಜಿಗಳನ್ನು ಹರಪನಹಳ್ಳಿ ಸಹಾಯಕ ನಿರ್ದೇಶಕರ ಕಚೇರಿಗಳಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿಯ ಮೀನುಗಾರಿಕೆ ಕಚೇರಿ ಸಹಾಯಕ ನಿರ್ದೇಶಕರ ಅಧಿಕಾರಿ ಕೆ.ಎನ್.ಮಂಜುನಾಥ ಮೊ.8217725319 ಸಂಖ್ಯೆಗಳಿಗೆ ಕರೆ ಮಾಡಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande