
ರಾಯಚೂರು, 08 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಕಾಶವಾಣಿ ರಾಯಚೂರು ಕೇಂದ್ರವು ಡಿಸೆಂಬರ್ 09ರ ಸಂಜೆ 6.51ರಿಂದ 7.34ರವರೆಗೆ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆ ಪರ್ಯಾಯ ಬೆಳೆಪದ್ದತಿ ಮತ್ತು ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ಕುರಿತು ನೇರ ಫೋನ್-ಇನ್ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ.
ಈ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಬೇಸಾಯ ವಿಜ್ಞಾನಿಗಳಾದ ಡಾ.ಎಂ.ಎ.ಬಸವಣ್ಣೆಪ್ಪ ಮತ್ತು ಕೀಟ ವಿಜ್ಞಾನಿಗಳಾದ ಡಾ.ಶಿವಾನಂದ ಜಿ ಹಂಚಿನಾಳ ಅವರು ಭಾಗವಹಿಸಿ ರೈತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.
ಕೇಳುಗರು ಬಳಸುಬಹುದಾದ ರಾಯಚೂರು ಆಕಾಶವಾಣಿಯ ದೂರವಾಣಿ ಸಂಖ್ಯೆ 08532–295898 ಅಥವಾ 08532-200312 ಇವುಗಳಿಗೆ ಕರೆಮಾಡಿ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತಕ್ಕೆ ಪರ್ಯಾಯ ಬೆಳೆಪದ್ದತಿ ಮತ್ತು ಹಿಂಗಾರು ಬೆಳೆಗಳಲ್ಲಿ ಕೀಟಗಳ ನಿರ್ವಹಣೆ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಸಾರ್ವಜನಿಕರು ಮತ್ತು ರೈತ ಬಾಂಧವರು ಈ ಕಾರ್ಯಕ್ರಮದ ಪ್ರಯೋಜನೆ ಪಡೆಯಲು ಕೋರಲಾಗಿದೆ ಎಂದು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ವೆಂಕಟೇಶ ಬೇವಿನಬೆಂಚಿ ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್