
ಗದಗ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗನಲ್ಲಿ ಪಶುಪಾಲಕ ರೈತರಿಗೆ ಮತ್ತು ಆಸಕ್ತ ಯುವಕ-ಯುವತಿಯರಿಗೆ ಪಶುಪಾಲನೆಯಲ್ಲಿ ಉದ್ಯಮಶೀಲತೆ ಮತ್ತು ವಿನೂತನ ತಂತ್ರಜ್ಞಾನಗಳು ಎಂಬ ವಿಷಯದ ಕುರಿತು ಡಿ. 22 ರಿಂದ ಡಿ. 23ರ ವರೆಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ತರಬೇತಿಯು ಉಚಿತವಾಗಿರುತ್ತದೆ, ತರಬೇತಿಗೆ ಮುಂಚಿತವಾಗಿಯೇ ನೊಂದಾಯಿಸುವುದು ಕಡ್ಡಾಯ, ಆಸಕ್ತ ರೈತರು ಸದರಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು, ಮೊಬೈಲ್, ವಾಟ್ಸಪ್ ಅಥವಾ ಈ-ಮೇಲ್ ಮೂಲಕ ತಮ್ಮ ವಿವರಗಳನ್ನು ಕಳುಹಿಸಿ ನೊಂದಣಿ ಮಾಡಿಸಬೇಕು. ತರಬೇತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಶುವೈದ್ಯಕೀಯ ವಿಸ್ತರಣ ಶಿಕ್ಷಣ ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯದ ಮುಖ್ಯಸ್ಥರು ಡಾ.ಶಿವಕುಮಾರ ಕ ರಡ್ಡೇರ, ಸಂಪರ್ಕಿಸಬಹುದಾಗಿದೆ ಮೊಬೈಲ್ ಸಂಖ್ಯೆ 8197983914, 9900115524, ಈ-ಮೇಲ್ ಕೋರಿದೆ.
ಹಿಂದೂಸ್ತಾನ್ ಸಮಾಚಾರ್ / lalita MP