
ಪಣಜಿ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗೋವಾದ ರೆಸ್ಟೋರೆಂಟ್-ಕ್ಲಬ್ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಪೈಕಿ ಪ್ರವಾಸಿಗರು ಹಾಗೂ ರೆಸ್ಟೋರೆಂಟ್ ಸಿಬ್ಬಂದಿಗಳು ಸೇರಿ ಮೂವರು ಮಹಿಳೆಯರು ಮತ್ತು 20 ಪುರುಷರು ಸಜೀವ ದಹನವಾಗಿದ್ದಾರೆ.
ಉತ್ತರ ಗೋವಾದ, ಅರ್ಪೋರಾ ದಲ್ಲಿರುವ ಬರ್ಚ್ ಬೈ ರೋಮಿಯೋ ಲೇನ್ ಎಂಬ ಕ್ಲಬ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಗೋವಾ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರ ಮಾಹಿತಿ ಪ್ರಕಾರ, ಮೃತರೆಲ್ಲರೂ ಬಹುತೇಕ ಕ್ಲಬ್‌ನ ಸಿಬ್ಬಂದಿ ಎಂದು ತಿಳಿಸಿದ್ದಾರೆ.
ಅಪಘಾತದ ಬಗ್ಗೆ ಆಘಾತ ವ್ಯಕ್ತಪಡಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್, “ನಿಯಮಗಳನ್ನು ಲೆಕ್ಕಿಸದೆ ಕಾನೂನುಬಾಹಿರವಾಗಿ ಸಂಸ್ಥೆಗಳನ್ನು ನಡೆಸುವ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ. 23 ಅಮೂಲ್ಯ ಪ್ರಾಣ ಕಳೆದು ಹೋಗಿರುವುದು ಗೋವಾದಂತಹ ಪ್ರವಾಸೋದ್ಯಮ ರಾಜ್ಯಕ್ಕೆ ದೊಡ್ಡ ಆಘಾತ,” ಎಂದು ಹೇಳಿದ್ದಾರೆ. ಸರ್ಕಾರದಿಂದ ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa