ವಕ್ಫ್ ಆಸ್ತಿಗಳ ಡಿಜಿಟಲ್ ದಾಖಲು ಕಾರ್ಯ ಪೂರ್ಣ
ನವದೆಹಲಿ, 07 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಕ್ಫ್ ಆಸ್ತಿಗಳ ಡಿಜಿಟಲೀಕರಣಕ್ಕಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಜಾರಿಗೆ ತಂದಿದ್ದ ‘ಉಮೀದ್’ ಪೋರ್ಟಲ್ ಆರು ತಿಂಗಳ ಗಡುವು ಪೂರ್ಣವಾದ ನಂತರ ಡಿಸೆಂಬರ್ 6ರಂದು ಅಧಿಕೃತವಾಗಿ ಮುಚ್ಚಲಾಯಿತು. ಜೂನ್ 6, 2025 ರಂದು ಕೇಂದ್ರ ಸಚಿವ ಕಿರಣ್ ರಿಜಿಜು
Close


ನವದೆಹಲಿ, 07 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಕ್ಫ್ ಆಸ್ತಿಗಳ ಡಿಜಿಟಲೀಕರಣಕ್ಕಾಗಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಜಾರಿಗೆ ತಂದಿದ್ದ ‘ಉಮೀದ್’ ಪೋರ್ಟಲ್ ಆರು ತಿಂಗಳ ಗಡುವು ಪೂರ್ಣವಾದ ನಂತರ ಡಿಸೆಂಬರ್ 6ರಂದು ಅಧಿಕೃತವಾಗಿ ಮುಚ್ಚಲಾಯಿತು.

ಜೂನ್ 6, 2025 ರಂದು ಕೇಂದ್ರ ಸಚಿವ ಕಿರಣ್ ರಿಜಿಜು ಉದ್ಘಾಟಿಸಿದ್ದ ಈ ಪೋರ್ಟಲ್‌ ಮೂಲಕ ರಾಷ್ಟ್ರವ್ಯಾಪಿ ವಕ್ಫ್ ಆಸ್ತಿಗಳ ದತ್ತಾಂಶವನ್ನು ದಾಖಲಿಸುವ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಸಚಿವಾಲಯದ ಸಮನ್ವಯ, ಪರಿಶೀಲನಾ ಸಭೆಗಳು ಹಾಗೂ ತರಬೇತಿ ಕಾರ್ಯಕ್ರಮಗಳ ಪರಿಣಾಮವಾಗಿ ಒಟ್ಟು 5,17,040 ವಕ್ಫ್ ಆಸ್ತಿಗಳ ಮಾಹಿತಿ ಅಪ್‌ಲೋಡ್ ಆಗಿದ್ದು, ಅವುಗಳಲ್ಲಿ 2,16,905 ಅನುಮೋದಿತ, 2,13,941 ಪ್ರಕ್ರಿಯೆಯಲ್ಲಿರುವ ಮತ್ತು 10,869 ತಿರಸ್ಕರಿಸಲಾದ ಆಸ್ತಿಗಳು ದಾಖಲಾಗಿವೆ.

ಡಾ. ಚಂದ್ರಶೇಖರ್ ಕುಮಾರ್ ನೇತೃತ್ವದಲ್ಲಿ ನಡೆಸಿದ ರಾಷ್ಟ್ರೀಯ ಮಟ್ಟದ ಸಭೆಗಳು, ಪ್ರಾದೇಶಿಕ ಕಾರ್ಯಾಗಾರಗಳು ಹಾಗೂ ತಾಂತ್ರಿಕ ಸಹಾಯವಾಣಿಯಿಂದ ಪೋರ್ಟಲ್ ಕಾರ್ಯಾಚರಣೆ ಸುಗಮಗೊಂಡಿದ್ದು, ವಕ್ಫ್ ಆಸ್ತಿಗಳ ಪಾರದರ್ಶಕ ಮತ್ತು ಸಮಗ್ರ ಡಿಜಿಟಲ್ ನಿರ್ವಹಣೆಗೆ ಇದು ಪ್ರಮುಖ ಹೆಜ್ಜೆ ಎಂದು ಸಚಿವಾಲಯ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande