
ಗದಗ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗದಗ ಬೈಪಾಸ್ ಮೂಲಕ ಬೆಂಗಳೂರು ನಿಂದ ವಿಜಯಪುರ ಕ್ಕೆ ಹೋಗುವ ಮಾರ್ಗದ ರೈಲುಗಳು ಬೈಪಾಸ್ ಮೂಲಕ ಸಮಯ ಉಳಿತಾಯ ಆಗುವುದು ಅಂತಹ ಸಂಚರಿಸುವ ಟ್ರೇನ್ ಗಳು ಗದಗ ಮೇನ್ ಜಂಕ್ಷನ್ ಮೂಲಕ ಸಂಚಾರ ಮಾಡಲು ರೈಲ್ವೆ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರು ವಿಶ್ವನಾಥ ಖಾನಾಪೂರ ಇವರು ಅಗ್ರಹಿಸಿದ್ದಾರೆ.
ಗದಗ ಪ್ರವಾಸೋದ್ಯಮ ಕ್ಷೇತ್ರದ ಜೊತೆಗೆ ವಿಜಯಪುರ ಹಾಗೂ ಮುಂದೆ ಹೊಸಪೇಟೆ ಹಾಗೂ ಕೊಪ್ಪಳ ಹಾಗೂ ಗಂಗಾವತಿ ಕುಷ್ಟಗಿ ಗೆ ಹೋಗುವ ಪ್ರಯಾಣಿಕರ ಜೊತೆಗೆ ಗದಗ ಜಿಲ್ಲೆಯ ಜನರಿಗೆ ಈ ಮಾರ್ಗ ಬಹಳಷ್ಟು ಮಹತ್ವ ಇರುವುದು ದಯಮಾಡಿ ಕೇವಲ 30 ನಿಮಿಷಗಳ ಕಾಲ ಇಂಜಿನ್ ಬದಲಾವಣೆಗೆ ಸಮಯ ಬೇಕಾಗುತ್ತದೆ. ದಯಮಾಡಿ ಈ 30 ನಿಮಿಷಗಳ ವಿಳಂಬಕ್ಕೆ ಈ ಭಾಗದ ಬಹಳಷ್ಟು ಜನರಿಗೆ ತೊಂದರೆ ಆಗುವುದು ಮೊದಲೇ ನಮ್ಮ ಗದಗ ಗೆ ಟ್ರೇನ್ ಸಂಖ್ಯೆ ಕಡಿಮೆ ಇರುವುದು. ಅಲ್ಲದೇ ಬೈಪಾಸ್ ಸರಕು ಸಾಗಣೆಗೆ ಮಾತ್ರ ಸೀಮಿತ ಮಾಡಲು ವಿನಂತಿ.
ಮುಂದೆ ಇದೆ ತರಹದ ಎಲ್ಲಾ ಎಕ್ಸ್‌ಪ್ರೆಸ್ ರೈಲುಗಳು ಬೈಪಾಸ್ ಮೂಲಕ ಸಂಚಾರ ಆದರೆ ನಮ್ಮ ಗದಗ ದ ಎಲ್ಲರಿಗೂ ತೊಂದರೆ ಆಗುವುದು. ದಯಮಾಡಿ ವಿಜಯಪುರ ಜಿಲ್ಲೆಯ ಪ್ರಭಾವಿ ಮುಖಂಡರು ಶ್ರೀ ಎಂ ಬಿ ಪಾಟೀಲ ಇವರು ಗಮನ ಹರಿಸಲು ಮನವಿ.
ದಯಮಾಡಿ ಈ ಭಾಗದ ಶಾಸಕರು ಉಸ್ತುವಾರಿ ಸಚಿವರು ಹಾಗೂ ಲೋಕಸಭಾ ಸದಸ್ಯರು ಗಮನ ಹರಿಸಿ ಜನರಿಗೆ ಆಗುವ ತೊಂದರೆಗಳ ಗಮನಕ್ಕೆ ತಂದು ಗದಗ ಮೇನ್ ಜಂಕ್ಷನ್ ಮೂಲಕ ಸಂಚಾರ ಮಾಡುವಂತೆ ರೈಲ್ವೆ ಇಲಾಖೆಗೆ ಗಮನಕ್ಕೆ ತರಬೇಕು ಅಂತಹ ವೇದಿಕೆ ಅಧ್ಯಕ್ಷರು ವಿಶ್ವನಾಥ ಖಾನಾಪೂರ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿರುತ್ತಾರೆ.
ಹಿಂದೂಸ್ತಾನ್ ಸಮಾಚಾರ್ / lalita MP