
ಧಾರವಾಡ, 07 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸರಕಾರ ಪುರಸ್ಕ್ರತ ಅಮೃತ ಮಿತ್ರ-2.0 ಯೋಜನೆಯಡಿ ನವಲಗುಂದ ಪುರಸಭೆ ಕಾರ್ಯಾಲಯ ಡೇ-ನಲ್ಮ ವಿಭಾಗದಡಿಯಲ್ಲಿ ತಾಂತ್ರಿಕೇತರ (ನಾನ್-ಟೆಕ್ನಿಕಲ್) ಚಟುವಟಿಕೆಗಳ ನಿರ್ವಹಣೆಗಾಗಿ ಡೇ-ನಲ್ಮ ಯೋಜನೆಯಡಿ ರಚಿಸಲ್ಪಟ್ಟ ಮಹಿಳಾ ಸ್ವ-ಸಹಾಯ ಸಂಘಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಮೃತ ಮಿತ್ರ 2.0 ಯೋಜನೆಯು ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನ ಗೊಳುತ್ತಿದ್ದು, ಇವುಗಳ ಮುಖ್ಯ ಉದ್ದೇಶ ಉದ್ಯಾನವನಗಳ ನಿರ್ವಹಣೆ ಹಾಗೂ ನಗರದ ಸೌಂದರ್ಯವನ್ನು ವೃದ್ಧಿಪಡಿಸುವದು.
ಆಸಕ್ತ ಮಹಿಳಾ ಸಂಘಗಳು ಡಿಸೆಂಬರ್ 15, 2025 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ ವಿಭಾಗದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ನವಲಗುಂದ ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa