ಮುಂದುವರೆದ ಇಂಡಿಗೋ ವಿಮಾನ ಪ್ರಯಾಣಿಕರ ಪರದಾಟ
ಬೆಂಗಳೂರು, 06 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟ ಸತತ ಐದನೇ ದಿನವೂ ರದ್ದಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ಅನನುಕೂಲಕ್ಕೆ ಒಳಗಾಗಿದ್ದಾರೆ. ಬೆಳಗ್ಗಿನಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ನಿ
Indigo problem


ಬೆಂಗಳೂರು, 06 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನಗಳ ಹಾರಾಟ ಸತತ ಐದನೇ ದಿನವೂ ರದ್ದಾಗುತ್ತಿರುವುದರಿಂದ ಪ್ರಯಾಣಿಕರು ತೀವ್ರ ಅನನುಕೂಲಕ್ಕೆ ಒಳಗಾಗಿದ್ದಾರೆ. ಬೆಳಗ್ಗಿನಿಂದಲೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರು ನಿರ್ಗಮನ ಗೇಟ್ ಹಾಗೂ ಇಂಡಿಗೋ ಕೌಂಟರ್‌ಗಳ ಎದುರು ಉದ್ದನೆಯ ಸರದಿಯಲ್ಲಿ ನಿಂತು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ವಿಮಾನಗಳು ಸಮಯಕ್ಕೆ ಹಾರದೇ ನಿರಂತರವಾಗಿ ರದ್ದು ಆಗುತ್ತಿರುವುದರಿಂದ ಈಗಾಗಲೇ ಟಿಕೆಟ್‌ಗಳನ್ನು ಕಾಯ್ದಿರಿಸಿದವರು ಮರು ವೇಳಾಪಟ್ಟಿ ಅಥವಾ ಹಣ ಮರಳಿ ಪಡೆಯಲು ಹೆಣಗುತ್ತಿರುವುದು ಕಂಡು ಬಂದಿದೆ.

ಶುಕ್ರವಾರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ವಿಮಾನಯಾನ ಸಂಸ್ಥೆಯೊಂದಿಗೆ ಸಭೆ ನಡೆಸಿ ಸೂಚನೆಗಳನ್ನು ನೀಡಿದ ನಂತರ ವ್ಯವಸ್ಥೆ ಸುಧಾರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದ್ದು, ಪರಿಸ್ಥಿತಿ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ.

ವಿಮಾನಗಳಿಗಾಗಿ ಗಂಟೆಗಳ ಕಾಲ ಕಾಯುತ್ತಿರುವ ಪ್ರಯಾಣಿಕರು ಲಗೇಜುಗಳ ಜೊತೆಗೇ ವಿಮಾನ ನಿಲ್ದಾಣದ ನೆಲದ ಮೇಲ ವಿಶ್ರಾಂತಿ ಪಡೆಯುತ್ತಿರುವುದು ಸಾಮಾನ್ಯವಾಗಿದೆ.

ವಿಮಾನ ರದ್ದು ಪರಿಣಾಮ : ಬಸ್‌ ದರಗಳಲ್ಲಿ ಹೆಚ್ಚಳ:

ಇಂಡಿಗೋ ಅಡಚಣೆಯಿಂದಾಗಿ ವಿಮಾನಗಳ ಲಭ್ಯತೆ ಕುಂಠಿತವಾಗಿರುವ ಹಿನ್ನೆಲೆ, ಪ್ರಯಾಣಿಕರು ಪರ್ಯಾಯವಾಗಿ ಬಸ್‌ಗಳನ್ನು ಆರಿಸಿಕೊಳ್ಳುತ್ತಿರುವುದರಿಂದ ಬೆಂಗಳೂರು ಮೂಲದಿಂದ ಹಲವು ಮಾರ್ಗಗಳಲ್ಲಿ ಬಸ್‌ ದರಗಳು ಏರಿಕೆಯಾಗಿದೆ.

ಬೆಂಗಳೂರು–ಮುಂಬೈ ಮಾರ್ಗದ ಸಾಮಾನ್ಯ ದರ₹1,500 – ₹2,500ರಿಂದ ₹4,500 – ₹10,000 ವರೆಗೆ ಏರಿಕೆಯಾಗಿದೆ.

ಬೆಂಗಳೂರು–ಪುಣೆ ಮಾರ್ಗದ ಸಾಮಾನ್ಯ ದರ: ₹1,200 – ₹1,600 ರಿಂದ ₹3,500 – ₹6,000ಕ್ಕೆ ಏರಿಕೆಯಾಗಿದ್ದು, ಖಾಸಗಿ ಬಸ್‌ ಆಪರೇಟರ್‌ಗಳು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅತಿಯಾದ ದರ ಏರಿಸಿ ಪ್ರಯಾಣಿಕರ ಪರದಾಟ ಮತ್ತಷ್ಟು ಹೆಚ್ಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande