
ನವದೆಹಲಿ, 06 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಮುಖ ಸಂವಾದ ಕಾರ್ಯಕ್ರಮ ‘ಪರೀಕ್ಷಾ ಪೆ ಚರ್ಚಾ’ 2026ರ ಜನವರಿಯಲ್ಲಿ ತನ್ನ 9ನೇ ಆವೃತ್ತಿಯನ್ನು ನಡೆಸಲಿದ್ದು, ಶಿಕ್ಷಣ ಸಚಿವಾಲಯ ಇಂದು ಈ ಕುರಿತು ಮಹತ್ವದ ಪ್ರಕಟಣೆ ಹೊರಡಿಸಿದೆ.
ಈ ಕಾರ್ಯಕ್ರಮಕ್ಕಾಗಿ ಭಾಗವಹಿಸುವವರ ಆಯ್ಕೆ ಹಿನ್ನೆಲೆಯಲ್ಲಿ MyGov ಪೋರ್ಟಲ್‌ನಲ್ಲಿ ಜನವರಿ 11, 2026 ರವರೆಗೆ ವಿಶೇಷ ಎಂಸಿಕ್ಯೂ ಆಧಾರಿತ ಆನ್‌ಲೈನ್ ಸ್ಪರ್ಧೆ ನಡೆಯಲಿದೆ. 6 ರಿಂದ 12 ನೇ ತರಗತಿವರೆಗಿನ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ.
ನೋಂದಾಯಿತ ಪ್ರತಿಯೊಬ್ಬರಿಗೂ MyGov ನಿಂದ ಭಾಗವಹಿಸುವಿಕೆಯ ಪ್ರಮಾಣಪತ್ರ ಲಭ್ಯವಾಗಲಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa