
ನವದೆಹಲಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಮಾಜದ ಕಲ್ಯಾಣಕ್ಕೆ ದಾನಶೀಲ ಮತ್ತು ಪರೋಪಕಾರಿ ಮನೋಭಾವ ಅತ್ಯಂತ ಅಗತ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
ಪರೋಪಕಾರಿ ಚಿಂತನೆಯಿಂದ ಮಾತ್ರ ಸಮಾಜಕ್ಕೆ ನಿಜವಾದ ಪ್ರಯೋಜನ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಸೇವೆ ಮತ್ತು ದಾನಶೀಲತೆಯ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ರಾಷ್ಟ್ರಕ್ಕೆ ಸ್ಫೂರ್ತಿ ನೀಡುವ ಸಲುವಾಗಿ ಮಹಾಭಾರತದ ಪ್ರಾಚೀನ ಸಂಸ್ಕೃತ ಶ್ಲೋಕವೊಂದನ್ನು ಉಲ್ಲೇಖಿಸಿ, “ಪರೋಪಕಾರಿ ಚಿಂತನೆಗಳ ಮೂಲಕ ಮಾತ್ರ ನಾವು ಸಮಾಜಕ್ಕೆ ಪ್ರಯೋಜನವನ್ನು ನೀಡಬಹುದು” ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಸಂದರ್ಭ ಅವರು, “ಯಥಾ ಯಥಾ ಹಿ ಪುರುಷಃ ಕಲ್ಯಾಣೇ ರಮತೇ ಮನಃ। ತಥಾ ತಥಾಸ್ಯ ಸರ್ವಾರ್ಥಾಃ ಸಿದ್ಧ್ಯಂತೇ ನಾತ್ರ ಸಂಶಯಃ” ಎಂಬ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿ, ವ್ಯಕ್ತಿಯು ತನ್ನ ಮನಸ್ಸನ್ನು ಕಲ್ಯಾಣ ಚಟುವಟಿಕೆಗಳಿಗೆ ಸಮರ್ಪಿಸಿದರೆ ಅವನ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿವರಿಸಿದ್ದಾರೆ.
ಸಕಾರಾತ್ಮಕ, ಸಮಾಜಮುಖಿ ಮತ್ತು ಪರೋಪಕಾರಿ ಚಿಂತನೆಗಳು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲ, ಇಡೀ ಸಮಾಜದ ಬಲವರ್ಧನೆಗೂ ಕಾರಣವಾಗುತ್ತವೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa