
ನವದೆಹಲಿ, 31 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿ-ಎನ್‌ಸಿಆರ್ ಮತ್ತು ಉತ್ತರ ಭಾರತದಲ್ಲಿ ದಟ್ಟ ಮಂಜು ಆವರಿಸಿದ ಪರಿಣಾಮ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಕಾರ್ಯಾಚರಣೆ ಅಸ್ತವ್ಯಸ್ತಗೊಂಡಿತು. ಗೋಚರತೆ ತೀವ್ರವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ 70 ನಿರ್ಗಮನ ಮತ್ತು 78 ಆಗಮನ ಸೇರಿದಂತೆ ಒಟ್ಟು 148 ವಿಮಾನಗಳ ಹಾರಾಟ ರದ್ದುಗೊಂಡಿದ್ದು, ಎರಡು ವಿಮಾನಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ.
ಮಂಜಿನಿಂದಾಗಿ ವಿಮಾನ ಚಲನೆಗಳು ನಿಧಾನಗೊಂಡಿದ್ದು ಹಲವು ಸೇವೆಗಳು ವಿಳಂಬವಾದವು. ಈ ಹಿನ್ನೆಲೆಯಲ್ಲಿ ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರಿಗೆ ಸಲಹೆ ನೀಡಿದ್ದು, ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ಹಾಗೂ ವಿಮಾನ ನಿಲ್ದಾಣಕ್ಕೆ ತೆರಳುವಾಗ ಹೆಚ್ಚುವರಿ ಸಮಯ ಕಾಯ್ದುಕೊಳ್ಳುವಂತೆ ಮನವಿ ಮಾಡಿದೆ. ಮಂಗಳವಾರವೂ ಇದೇ ರೀತಿ ಮಂಜಿನ ಪರಿಣಾಮವಾಗಿ ಐಜಿಐನಲ್ಲಿ 118 ವಿಮಾನಗಳು ರದ್ದಾಗಿದ್ದವು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa