ದೆಹಲಿ ವಿಮಾನ ನಿಲ್ದಾಣದಲ್ಲಿ ಗೋಚರತೆ ಸುಧಾರಣೆ ; ವಿಮಾನ ಸಂಚಾರ ಸಾಮಾನ್ಯ
ನವದೆಹಲಿ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಭಾರಿ ಮಂಜಿನಿಂದ ಉಂಟಾಗಿದ್ದ ಅಡಚಣೆಗಳ ನಂತರ ಗೋಚರತೆ ಸುಧಾರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿಮಾನ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ. ಗೋಚರತೆ ಸುಧಾರಿಸಿದ ಬಳಿಕ
Delhi airport


ನವದೆಹಲಿ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಭಾರಿ ಮಂಜಿನಿಂದ ಉಂಟಾಗಿದ್ದ ಅಡಚಣೆಗಳ ನಂತರ ಗೋಚರತೆ ಸುಧಾರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ವಿಮಾನ ಕಾರ್ಯಾಚರಣೆಗಳು ಸಾಮಾನ್ಯ ಸ್ಥಿತಿಗೆ ಮರಳಿವೆ.

ಗೋಚರತೆ ಸುಧಾರಿಸಿದ ಬಳಿಕ ವಿಮಾನಗಳ ಆಗಮನ–ನಿರ್ಗಮನ ಸರಾಗವಾಗಿ ನಡೆಯುತ್ತಿವೆ ಎಂದು ಐಜಿಐ ವಿಮಾನ ನಿಲ್ದಾಣದ ನಿರ್ವಾಹಕ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರಿಗೆ ಸಹಾಯ ಮತ್ತು ಅಗತ್ಯ ಬೆಂಬಲ ಒದಗಿಸುವ ಉದ್ದೇಶದಿಂದ ಎಲ್ಲಾ ಟರ್ಮಿನಲ್‌ಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಡಿಐಎಎಲ್ ಭರವಸೆ ನೀಡಿದೆ.

ನಗರವನ್ನು ಆವರಿಸಿದ್ದ ಬೆಳಗಿನ ಭಾರೀ ಮಂಜು ನಿಧಾನವಾಗಿ ಕರಗಿದ ಪರಿಣಾಮ ಗೋಚರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರವು ಹಂತಹಂತವಾಗಿ ಸುಗಮಗೊಂಡಿದೆ ಎಂದು ತಿಳಿಸಲಾಗಿದೆ. ಆದರೂ, ಇತ್ತೀಚಿನ ವಿಮಾನ ವೇಳಾಪಟ್ಟಿಗಳ ಕುರಿತು ಪ್ರಯಾಣಿಕರು ತಮ್ಮ ಸಂಬಂಧಿತ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಿಕೊಳ್ಳುವಂತೆ ಡಿಐಎಎಲ್ ಸಲಹೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande