
ವಿಜಯಪುರ, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ ಸನ್ನದುಗಳ ಇ-ಹರಾಜು ಪ್ರಕ್ರಿಯೆಯು ಜನವರಿ 13 ರಿಂದ 20ರವರೆಗೆ ಆನ್‌ಲೈನ್ ಮೂಲಕ ನಡೆಯಲಿದೆ ಎಂದು ಬೆಳಗಾವಿಯ ಜಾರಿ ಮತ್ತು ತನಿಖೆ ವಿಭಾಗದ ಅಬಕಾರಿ ಜಂಟಿ ಆಯುಕ್ತರಾದ ಪಕೀರಪ್ಪ ಚಲವಾದಿ ಹೇಳಿದರು.
ವಿಜಯಪುರ ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಇದೇ ಮೊದಲ ಬಾರಿಗೆ ಇ-ಹರಾಜು ಪ್ರಕ್ರಿಯೆಯು ನಡೆಯಲಿದ್ದು, ಈಗಾಗಲೇ ಡಿಸೆಂಬರ್ 22ರಿಂದ ಇ-ಹರಾಜಿಗೆ ನೋಂದಣಿ ಕಾರ್ಯ ಆನ್‌ಲೈನ್ ಮೂಲಕ ಆರಂಭವಾಗಿದೆ.
https://ststeexcise.karnataka.gov.in ಹಾಗೂhttps://www.mstcecommerce.com ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ನೋಂದಣಿಗೆ ಜಿಎಸ್‌ಟಿ ಸೇರಿದಂತೆ ರೂ. ಒಂದು ಸಾವಿರ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಎಂಎಸ್‌ಟಿಸಿ ಲಿಮಿಟೆಡ್ ಇ-ಪೊರ್ಟಲ್‌ನಲ್ಲಿ ಈ-ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಸನ್ನದು ಅವಧಿಯು ಐದು ವರ್ಷದಾಗಿದ್ದು, ಪ್ರತಿ ವರ್ಷ ನವೀಕರಣ ಮಾಡಿಕೊಳ್ಳಬೇಕು. ಅಬಕಾರಿ ಇಲಾಖೆಯ ಉಪ ಆಯುಕ್ತರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 8 ಸಿಎಲ್ ಸನ್ನದುಗಳಿದ್ದು, ಅದರಲ್ಲಿ 7 ಸಿಎಲ್2ಎ ಹಾಗೂ 1 ಸಿಎಲ್ 9ಎ ಸ್ಥಗಿತಗೊಂಡಿರುವ ಸನ್ನದುಗಳಿಗೆ ಇ-ಹರಾಜು ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ನೋಂದಾಯಿತರಿಗೆ ಇ-ಹರಾಜು ಪ್ರಕ್ರಿಯೆಯ ಕುರಿತು ಜನವರಿ 2ರಂದು ಬಾಗಲಕೋಟೆಯ ನವನಗರದಲ್ಲಿರುವ ಜಿಲ್ಲಾಡಳಿತದ ಸಭಾಂಗಣದಲ್ಲಿ ತರಬೇತಿ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಜನವರಿ 19ರ ಮಧ್ಯಾಹ್ನ 3ಗಂಟೆಯಿAದ ಸಂಜೆ 5 ಗಟೆಯವರೆಗೆ ಸ್ಲಾಟ್ 2ರ ಇ-ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ,ನಗರ ಸಭೆ, ಮಹಾನಗರ ಪಾಲಿಕೆಯನುಸಾರ ಮೂಲ ಬೆಲೆಯನ್ನು ನಿಗದಿ ಪಡಿಸಲಾಗಿದೆ. ಮೀಸಲಾತಿ ಪಡೆಯುವವರು ಕರ್ನಾಟಕದಲ್ಲಿನ ಜಾತಿ ಪ್ರಮಾಣ ಪತ್ರ ಹೊಂದಿರಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಇಲಾಖೆಯ ಉಪ ಆಯುಕ್ತರ ಕಾರ್ಯಾಲಯ ಶಿಕಾರಖಾನ ಸ್ಟೇಷನ್ ಬ್ಯಾಕ್ ರಸ್ತೆ ಹಾಗೂ ಕಚೇರಿ ದೂರವಾಣಿ ಸಂಖ್ಯೆ 08352-244602 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮುರಳಿಧರ, ಅಧೀಕ್ಷಕರಾದ ಎಲ್.ಎಸ್.ಸಲಗರ, ಉಪ ಅಧೀಕ್ಷಕರಾದ ಶ್ರೀಶೈಲ ಹಿರೇಮಠ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande