ಡಿ. 27ರಂದು ವಿದ್ಯುತ್ ವ್ಯತ್ಯಯ
ಕೊಪ್ಪಳ, 25 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜೆಸ್ಕಾಂನ 110 ಕೆವಿ ಕೊಪ್ಪಳ ಉಪಕೇಂದ್ರ ಮತ್ತು 33 ಕೆವಿ ಕಿನ್ನಾಳ ಉಪಕೇಂದ್ರದ ಫೀಡರ್ ವ್ಯಾಪ್ತಿಯಲ್ಲಿ ಡಿಸೆಂಬರ್ 27ರ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ. 110 ಕೆವಿ ಕೊಪ್ಪಳ ಉಪಕೇಂದ್ರ ಮತ್ತು 33 ಕೆವಿ ಕಿನ್ನಾಳ ಉಪಕೇಂದ್ರದಲ್ಲಿ ತ್ರೈಮಾಸಿ
ಡಿ. 27ರಂದು ವಿದ್ಯುತ್ ವ್ಯತ್ಯಯ


ಕೊಪ್ಪಳ, 25 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜೆಸ್ಕಾಂನ 110 ಕೆವಿ ಕೊಪ್ಪಳ ಉಪಕೇಂದ್ರ ಮತ್ತು 33 ಕೆವಿ ಕಿನ್ನಾಳ ಉಪಕೇಂದ್ರದ ಫೀಡರ್ ವ್ಯಾಪ್ತಿಯಲ್ಲಿ ಡಿಸೆಂಬರ್ 27ರ ಶನಿವಾರ ವಿದ್ಯುತ್ ವ್ಯತ್ಯಯವಾಗಲಿದೆ.

110 ಕೆವಿ ಕೊಪ್ಪಳ ಉಪಕೇಂದ್ರ ಮತ್ತು 33 ಕೆವಿ ಕಿನ್ನಾಳ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯ ನಿಮಿತ್ತ ಎಫ್-1ಕಾಮನೂರ, ಎಫ್-2ಕೆಡಬ್ಲ್ಯೂ.ಎಸ್., ಎಫ್-3 ಎಸ್.ಜಿ ಕಾಲೇಜ್, ಎಫ್-4 ಎಲ್.ಐ.ಎಸ್., ಎಫ್-5 ಬಗನಾಳ, ಎಫ್-6 ಬಸಾಪೂರ, ಎಫ್-8 ಭಾಗ್ಯನಗರ, ಎಫ್-9 ಬನ್ನಿಕಟ್ಟಿ, ಎಫ್-10 ಗವಿಮಠ, ಎಫ್-11 ಡಿಸಿ ಆಫೀಸ್, ಎಫ್-12 ತಾಲೂಕ ಪಂಚಾಯತ, ಎಫ್-13 ಕಾಳಿದಾಸನಗರ, ಎಫ್-14 ಜಾತ್ರ ಫೀಡರ್ ಮತ್ತು ಎಫ್-1 ದೇವಲಾಪೂರ, ಎಫ್-2 ಕಿನ್ನಾಳ, ಎಫ್-3 ಓಜನಹಳ್ಳಿ, ಎಫ್-4 ಕಲಕೇರಿ, ಎಫ್-5 ಬುಡಶೆಟ್ನಾಳ, ಎಫ್-6 ಯತ್ನಟ್ಟಿ ಎನ್.ಜೆ.ವೈ (ಕಾರ್ಯ ಮತ್ತು ಪಾಲನಾ ಶಾಖೆ-1, ಶಾಖೆ-2, ಮತ್ತು ಭಾಗ್ಯನಗರ ಶಾಖೆಯ ಎಲ್ಲಾ ಏರಿಯಾ ಹಾಗೂ ಗ್ರಾಮಗಳು) ಪ್ರದೇಶಗಳಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು.

ನಿರ್ವಹಣೆ ಕಾರ್ಯವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಂಡಲ್ಲಿ ಯಾವುದೇ ಸಮಯದಲ್ಲೂ ವಿದ್ಯುತ್ ಸರಬರಾಜು ಪುನಃ ಪ್ರಾರಂಭಿಸಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ವಿಧದ ವಿದ್ಯುತ್ ದುರಸ್ತಿ ಅಥವಾ ಸಂಬಂಧಿತ ಕೆಲಸಗಳನ್ನು ಕೈಗೊಳ್ಳಬಾರದೆಂದು ಸೂಚಿಸಲಾಗಿದೆ. ವಿದ್ಯುತ್ ಅಪಘಾತ ಸಂಭವಿಸಿದಲ್ಲಿ ಕಂಪನಿಯು ಜವಾಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande