
ವಿಜಯಪುರ, 25 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಭಾರತದಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರು ಒದ್ದು ಹೊರಗೆ ಹಾಕಬೇಕು. ಜತೆಗೆ ಅವರಿಗೆ ಸಾತ್ ನೀಡುವವರನ್ನೂ ಒದ್ದು ಹೊರಗೆ ಹಾಕಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಗ್ಲಾ ದೇಶದಲ್ಲಿ ಮುಗ್ಧ ಹಿಂದೂ ಯುವಕನ ಸಜೀವ ದಹನ ಆಗಿದ್ದು ನೋವಿನ ಸಂಗತಿ ಎಂದರು.
ಕಾಂಗ್ರೆಸ್ ಹಾಗೂ ಅಲ್ಪಸಂಖ್ಯಾತರ ಪಕ್ಷಗಳು ಬಾಂಗ್ಲಾ ವಲಸಿಗರನ್ನು ಓಟ ಬ್ಯಾಂಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಅಂತಿಮ ಗಡುವು ನೀಡಬೇಕು ಎಂದರು.
ಗಡುವು ಬಳಿಕ ಬಾಂಗ್ಲಾದೇಶಕ್ಕೆ ಹೋಗದೇ ಇದ್ದರೆ ಗುಂಡಿಕ್ಕಿ ಕೊಲ್ಲಬೇಕು ಎಂದ ಯತ್ನಾಳ, ಇಲ್ಲದೇ ಹೋದರೆ ನಮ್ಮ ಭಾರತ ಉಳಿಯುವುದಿಲ್ಲ ಎಂದರು.
ಹಿಂದೂಸ್ತಾನ್ ಸಮಾಚಾರ್ / jyothi deshpande