ಮೆಟ್ರೋ ವಿಸ್ತರಣೆಯ ಮೂರು ಯೋಜನೆಗಳಿಗೆ ಕೇಂದ್ರ ಸಂಪುಟ ಅನುಮೋದನೆ
ನವದೆಹಲಿ, 24 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದೆಹಲಿ ಮೆಟ್ರೋ ಫೇಸ್–5ಎ ಅಡಿಯಲ್ಲಿ ರೂ.12,014.91 ಕೋಟಿ ವೆಚ್ಚದ ಮೂರು ಹೊಸ ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಒಟ್ಟು 16.076 ಕಿ.ಮೀ ಉದ್ದದ ಈ ವಿಸ್ತರಣೆ ರಾಷ್ಟ್ರೀಯ ರಾಜಧಾನಿಯ ಸಂಪರ್ಕ ವ್ಯವಸ್ಥೆಯನ್ನು ಮತ
Metro


ನವದೆಹಲಿ, 24 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದೆಹಲಿ ಮೆಟ್ರೋ ಫೇಸ್–5ಎ ಅಡಿಯಲ್ಲಿ ರೂ.12,014.91 ಕೋಟಿ ವೆಚ್ಚದ ಮೂರು ಹೊಸ ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಒಟ್ಟು 16.076 ಕಿ.ಮೀ ಉದ್ದದ ಈ ವಿಸ್ತರಣೆ ರಾಷ್ಟ್ರೀಯ ರಾಜಧಾನಿಯ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗಳಿಗೆ ಹಸಿರು ನಿಶಾನೆ ದೊರೆತಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.

ಅನುಮೋದಿತ ಮಾರ್ಗಗಳು:

ಆರ್‌.ಕೆ. ಆಶ್ರಮ ಮಾರ್ಗ–ಇಂದ್ರಪ್ರಸ್ಥ (9.913 ಕಿ.ಮೀ)

ಎಯರೋಸಿಟಿ–ಡೊಮೆಸ್ಟಿಕ್ ಏರ್‌ಪೋರ್ಟ್ ಟರ್ಮಿನಲ್–1 (2.263 ಕಿ.ಮೀ)

ತುಘಲಕಾಬಾದ್–ಕಾಲಿಂದಿ ಕುಂಜ (3.9 ಕಿ.ಮೀ)

ಈ ಮಾರ್ಗಗಳಲ್ಲಿ ಒಟ್ಟು 13 ನಿಲ್ದಾಣಗಳು ನಿರ್ಮಾಣವಾಗಲಿದ್ದು, ಅದರಲ್ಲಿ 10 ಅಂಡರ್‌ಗ್ರೌಂಡ್ ಹಾಗೂ 3 ಎಲಿವೇಟೆಡ್ ನಿಲ್ದಾಣಗಳಾಗಿವೆ. ಯೋಜನೆಯ ವೆಚ್ಚವನ್ನು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಭರಿಸಲಿದೆ.

ಯೋಜನೆ ಪೂರ್ಣಗೊಂಡ ಬಳಿಕ ಪಶ್ಚಿಮ, ಉತ್ತರ ಮತ್ತು ಹಳೆಯ ದೆಹಲಿಯ ಸಂಪರ್ಕವನ್ನು ಸೆಂಟ್ರಲ್ ದೆಹಲಿಯೊಂದಿಗೆ ಸುಧಾರಿಸುವುದರ ಜೊತೆಗೆ, ದಕ್ಷಿಣ ದೆಹಲಿಯ ತುಘಲಕಾಬಾದ್, ಸಾಕೇತ್, ಕಾಲಿಂದಿ ಕುಂಜ ಪ್ರದೇಶಗಳನ್ನು ಡೊಮೆಸ್ಟಿಕ್ ಏರ್‌ಪೋರ್ಟ್ ಟರ್ಮಿನಲ್–1 ಗೆ ಸಂಪರ್ಕ ಕಲ್ಪಿಸಲಿದೆ.

ಸೆಂಟ್ರಲ್ ವಿಸ್ಟಾ ಕಾರಿಡಾರ್ ಮೂಲಕ ಎಲ್ಲಾ ಕರ್ತವ್ಯ ಭವನಗಳಿಗೆ ನೇರ ಮೆಟ್ರೋ ಸಂಪರ್ಕ ದೊರೆಯಲಿದ್ದು, ದಿನಂಪ್ರತಿ ಸುಮಾರು 60 ಸಾವಿರ ಉದ್ಯೋಗಿಗಳು ಮತ್ತು 2 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡುವವರಿಗೆ ಲಾಭವಾಗಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande