ರಾಜ್ಯ ಮಟ್ಟದ 13ನೆಯ ನುಡಿಸಿರಿ ಸಮ್ಮೇಳನ : ರತ್ನ ಹಾಲಪ್ಪಗೌಡರ್ ಆಯ್ಕೆ
ಕೊಪ್ಪಳ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಜನೇವರಿ 4ರಂದು ಮೈಸೂರಿನ ವಿಜಯ ನಗರ ಮೊದಲ ಹಂತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರು
ರಾಜ್ಯ ಮಟ್ಟದ 13ನೆಯ ನುಡಿಸಿರಿ ಸಮ್ಮೇಳನ : ರತ್ನ ಹಾಲಪ್ಪಗೌಡರ್ ಆಯ್ಕೆ


ಕೊಪ್ಪಳ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳ ಜಿಲ್ಲೆಯ ಕುಕನೂರಿನ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ

ಜನೇವರಿ 4ರಂದು ಮೈಸೂರಿನ ವಿಜಯ ನಗರ ಮೊದಲ ಹಂತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಲಿರುವ ರಾಜ್ಯ ಮಟ್ಟದ 13ನೆಯ ಕನ್ನಡ ನುಡಿಸಿರಿ ಸಮ್ಮೇಳನಾಧ್ಯಕ್ಷರನ್ನಾಗಿ ಚುಟುಕು ಸಿರಿ ರತ್ನ ಹಾಲಪ್ಪ ಗೌಡರನ್ನು ಆಯ್ಕೆ ಮಾಡಲಾಗಿದೆ ಎಂದು ಸಮ್ಮೇಳನ ಸಂಚಾಲಕ ರುದ್ರಪ್ಪ ಭಂಡಾರಿ ತಿಳಿಸಿದ್ದಾರೆ.

ಮೂಲತ: ಮೈಸೂರಿನವರಾದ ಇವರು ಅನಿವಾಸಿ ಭಾರತೀಯರಾಗಿ ಕಳೆದ 25 ವರುಷಗಳಿಂದ ಕೆನಡಾ ದೇಶದಲ್ಲಿದ್ದು ವರನಟ ಡಾ. ರಾಜ್ ಕುಮಾರ್, ಪದ್ಮಶ್ರೀ ದೇಜಗೌ, ಚುಟುಕು ರತ್ನ ಸಿ.ಪಿ.ಕೆ, ಖ್ಯಾತ ಚಲನಚಿತ್ರ ಸಾಹಿತಿ ದೊಡ್ಡ ರಂಗೇಗೌಡರ ಸೇರಿದಂತೆ ಸುಮಾರು 25ಕ್ಕೂ ಅಧಿಕ ಕೃತಿಗಳನ್ನು ಪ್ರಕಟಿಸಿದ್ದಾರೆ.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ ಹಾಗೂ ಮೈಸೂರು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾರೆ.

ನಾಡಿನ ಸಂಸ್ಕೃತಿ ಪರಂಪರೆ, ನೆಲ, ಜಲ, ಶಿಕ್ಷಣ , ಕುರಿತಾಗಿ ವಿಚಾರ ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿವೆ ಎಂದು ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ರುದ್ರಪ್ಪ ಭಂಡಾರಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಪಾಧ್ಯಕ್ಷ ಡಾ. ತ್ಯಾಗರಾಜು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande