
ಕೊಪ್ಪಳ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಈ ನಾಡಿನ ಜನರ ಭಕ್ತಿಯ ನಿತ್ಯೋತ್ಸವ. ಜಾತ್ರಾ ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ ಪ್ರತಿವರ್ಷ ವಿನೂತನ ಕಾರ್ಯಯೋಜನೆ ರೂಪಿಸಿ ಅದನ್ನು ಅನುಷ್ಠಾನ ಗೂಳಿಸುತ್ತಿರುವುದು ತಮಗೆಲ್ಲ ವೇದ್ಯವಾಗಿದೆ. ಜಾತ್ರಾ ಮಹೋತ್ಸವದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಗಣನೀಯವಾಗುತ್ತಿರುವ ಹಿನ್ನಲೆಯಲ್ಲಿ ಸ್ವ-ಇಚ್ಛೆಯಿಂದ ಸೇವೆಸಲ್ಲಿಸುವ ಆಸಕ್ತ ಭಕ್ತಗಣ ಹೆಸರು ನೊಂದಾಯಿಸಲು ಕೋರಲಾಗಿದೆ.
ನೊಂದಾಯಿಸುವ ಮೊಬೈಲ್ ಸಂಖ್ಯೆ: 9844634990
ಸೇವೆ ಸಲ್ಲಿಸುವ ವಿಭಾಗಗಳು
1) ಸ್ವಚ್ಛತಾ ಸೇವೆ:
1. ಮಹಾರಥೋತ್ಸವದ ಮೈಧಾನ,
2. ಶ್ರೀ ಮಠದ ರಸ್ತೆ
3. ಮಹಾದಾಸೋಹದ ರಸ್ತೆ
4. ಮಠದ ಆವರಣ
5. ಮಹಾದಾಸೋಹ ಆವರಣ
6. ಕೈಲಾಸ ಮಂಟಪ
7. ಪ್ರಸಾದ ತಯಾರಿಸುವ ಸ್ಥಳ
8. ಜಾತ್ರಾ ಅಂಗಡಿ ಸ್ಥಳ
2) ಮಹಾದಾಸೋಹ ಸೇವೆ:
1. ತರಕಾರಿ ಹೆಚ್ಚುವುದು
2. ಪ್ರಸಾದ ತಯಾರಿಸುವುದು
3. ಪ್ರಸಾದ ಬಡಿಸುವುದು
4. ಅಡುಗೆ ಸಾಮಾನು ತೊಳೆಯುವುದು.
5. ರೊಟ್ಟಿ ಸಂಗ್ರಹಿಸುವುದು
6. ಕಟ್ಟಿಗೆ ಹೊರುವುದು(ಪ್ರಸಾದತಯ್ಯಾರಿಸುವ ಸ್ಥಳಕ್ಕೆ ತರುವುದು)
7. ಕಟ್ಟಿಗೆ ಒಡೆಯುವುದು
3) ಶಿಸ್ತು ಕರ್ತವ್ಯ ಸೇವೆ:
1) ಜಾತ್ರ ಆವರಣದಲ್ಲಿ ಶಿಸ್ತು ಕಾಪಾಡುವುದು
2) ಮಹಾದಾಸೋಹದಲ್ಲಿ ಶಿಸ್ತು ಕಾಪಾಡುವುದು
3) ವಾಹನಗಳ ನಿಲುಗಡೆ
4) ಯಾತ್ರಿಗಳಿಗೆ ಸಣ್ಣಪುಟ್ಟ ಅಂಗಡಿಗಳಿಂದ ತೊಂದರೆಯಾಗದಂತೆ ನೋಡುವುದು.
5) ಜಾತ್ರಾ ಅಂಗಡಿಗಳ ಶಿಸ್ತು ಕಾಪಾಡುವುದು.
4) ದಾಸ್ತಾನು ಸಂಗ್ರಹಣೆ ಸೇವೆ:
1) ದವಸದಾನ್ಯ ಸಂಗ್ರಹಿಸುವಲ್ಲಿ ಸಹಾಯ ಮಾಡುವುದು.
5) ಇತರ ಸೇವೆ :
1) ಶ್ರೀಮಠವು ಒಪ್ಪಿಸುವ ಯಾವುದೇ ಸೇವೆಗೆ ಸಿದ್ಧರಿರುವುದು.
ಈ ಮೇಲ್ಕಾಣಿಸಿದ ಸೇವೆಗಳಿಗೆ ಸಿದ್ಧವಿರುವ ಆಸಕ್ತಉರು/ಸಂಘ ಸಂಸ್ಥೆ/ ಇಲಾಖೆಯ ಭಕ್ತರು ಮಾಹಿತಿಯನ್ನು ಕಳುಹಿಸಬೇಕಾಗಿ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್