
ಕೊಪ್ಪಳ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನಗರದ ಗವಿಶ್ರೀ ನಗರದ ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರ ಇರುವ ಶ್ರೀ ಸಹಸ್ರಂಜನೇಯ ದೇವಸ್ಥಾನದಲ್ಲಿ ಆಂಜನೇಯನ ಆರಾಧಕ ಪ್ರಕಾಶ್ ಶಿಲ್ಪಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು.
ವಿಶ್ವದಲ್ಲಿಯೇ ಅತ್ಯಂತ ವಿಶಿಷ್ಟವಾದ ದೈವ ಅಂಕಲ್ಪಿತ ಮೂರ್ತಿ ಕೆತ್ತನೆ ಸೇವಾ ಕಾರ್ಯ ಮಾಡುತ್ತಿರುವ ಪ್ರಕಾಶ ಶಿಲ್ಪಿ ಅವರು ರವಿವಾರ 6895ನೇ ಆಂಜನೇಯನ ಮೂರ್ತಿಯನ್ನು ಶಿಲೆಯಲ್ಲಿ ಕೆತ್ತಿ ಪೂಜೆ ಮಾಡಿ ನೈವೇದ್ಯ ಸಲ್ಲಿಸಿದರು.
ಪ್ರಕಾಶ್ ಶಿಲ್ಪಿ ಅವರ ತಂದೆ ಮತ್ತು ಆಂಜನೇಯನ ಆರಾಧಕರಾಗಿದ್ದ ಶೇಖಣ್ಣಾಚಾರ ಶಿಲ್ಪಿ ಅವರ ಸ್ಮಾರಕ ಸ್ಥಳದಲ್ಲಿ 19 ನೇ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ ಶಿಲ್ಪಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಖಜಾಂಚಿ ರವಿ ಗುಜಮಾಗಡಿ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.
ಇದೇ ಸ್ಥಳದಲ್ಲಿ ಭವ್ಯವಾದ ಆಂಜನೇಯ ಸ್ವಾಮಿ ಮೂರು ವಿಶೇಷ ಅವತಾರ ಭ್ರಾಂತೇಶ, ಕಾಂತೇಶ, ಶಾಂತೇಶನನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ.
ಇಲ್ಲೇ ಈಗಾಗಲೇ ಕೆತ್ತಲಾಗಿರುವ ಏಕವ್ಯಕ್ತಿ ಶಿಲಾ 6900 ಮೂರ್ತಿಗಳನ್ನು ಸ್ಥಾಪಿಸಲಾಗುತ್ತದೆ. ಇಲ್ಲೇ ಅಯ್ಯೋಧ್ಯನ ಬಾಲರಾಮನ ಮೂರ್ತಿ ಮಾಡಿದ ಉಳಿದ ಶಿಲೆಯಲ್ಲಿ ರಾಮ, ಲಕ್ಷ್ಮಣ, ಸೀತೆ, ಹನುಮಂತರನ್ನು ಮಾಡಿ ಸ್ಥಾಪಿಸಲಾಗುತ್ತದೆ ಎಂದು ಟ್ರಸ್ಟ್ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್