
ಕೊಪ್ಪಳ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ತಾಲೂಕಿನ ಮೈನಹಳ್ಳಿ ಗ್ರಾಮದ ಸಾಹಿತಿ, ರಂಗಭೂಮಿ ಕಲಾವಿದ ಡಾ. ಷಣ್ಮುಖಯ್ಯ ಎ. ತೋಟದ ಅವರ
ಪುತ್ರ ಬಸವರಾಜಯ್ಯ ಅವರಿಗೆ ಅಮೇರಿಕಾದ `ಎಲಿಪಾಸೊದ ಟೆಕ್ಸಾಸ್ ವಿಶ್ವವಿದ್ಯಾಲಯ' ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.
`ಇಮೇಜ್ ಅಂಡ್ ಸಿಗ್ನಲ್ ಪೆÇ್ರಸೆಶಿಂಗ್ ಮೆತೆಡ್ ಪಾರ್ ಕ್ಲಿನಿಕಲ್ ಡಿಸಿಜನ್ ಸಪೆÇೀರ್ಟ' ವಿಷಯದ ಮಹಾಪ್ರಬಂಧಕ್ಕೆ ಈ ಪದವಿಯನ್ನು ಪ್ರದಾನ ಮಾಡಲಾದೆ ಎಂದು ವಿಶ್ವವಿದ್ಯಾಲಯವು ತಿಳಿಸಿದೆ.
ಡಾ. ಕಬರೇರಾ ಸಿರಾಗೋ 'ಡಿ' ಡಾ. ಅಭಿಷಿನ್ ಜೈನೂಟ್ ಎಂ.ಡಿ. ಹಾಗೂ ತಂಡದ ನೇತೃತ್ವದಲ್ಲಿ ಬಸವರಾಜಯ್ಯ ಅವರು ಸಂಶೋಧನೆ ನಡೆಸಿ, ಮಹಾಪ್ರಬಂಧ ಮಂಡಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್