
ಕೋಲಾರ, 22 ಡಿಸೆ0ಬರ್ (ಹ.ಸ.) :
ಆ್ಯಂಕರ್ : ಕಂದಾಯ ಸಚಿವ ಕೃಷ್ಣ ಬೈರೇಗೌಡರು ಕೋಲಾರ ತಾಲ್ಲೂಕಿನ ನರಸಾಪುರ ಹೋಬಳಿಯ ಗರುಡಪಾಳ್ಯ ಗ್ರಾಮದಲ್ಲಿ ಕೆರೆ,ಕರಾಬು ಹಾಗು ಕೆರೆ ಜಮೀನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ,ಮುಖ್ಯ ಸಚೇತಕ ಎನ್ .ರವಿ ಕುಮಾರ್ ಹಾಗು ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡರು ಸದನ ನಡೆಯುವಾಗ ಆರೋಪಿಸಿದ್ದರು.
ಬಿ.ಜೆ.ಪಿ ಮುಖಂಡರ ಈ ಹೇಳಿಕೆ ಸಂಚಲನ ಮೂಡಿಸಿತ್ತು. ಆದರೆ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಾಲ್ಲೂಕು ಕಛೇರಿಯಿಂದ ದಾಖಲೆಗಳನ್ನು ಪಡೆದು ಬಿ.ಜೆ.ಪಿ ಮುಖಂಡರು ಹಾಗು ಸಾಮಾಜಿಕ ಹೋಟಗಾರ ಮುನೇಶ್ ರವರಿಗೆ ದಾಖಲೆಗಳನ್ನು ಒದಗಿಸಿರುವುದಾಗಿ ಹೇಳಲಾಗಿದೆ.
ಬೆಳಗಾವಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಬಿ.ಜೆ.ಪಿ ಮುಖಂಡರ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಅಧಿಕಾರ ದುರುಪಯೋಗಪಡಿಸಿಕೊಂಡು ಸರ್ಕಾರಕ್ಕೆ ಸೇರಿದ ಖರಾಬು ಜಮೀನು, ಕೆರೆ ಮತ್ತು ರಾಜಕಾಲುವೆಯನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಕೃಷ್ಣ ಬೌರೇಗೌಡರ ವಿರುಧ್ಧ ತೀವ್ರತರವಾದ ಆರೋಪ ಮಾಡಿದ್ದರು.
ನರಸಾಪುರ ಹೋಬಳಿಯ ಗರುಡನಪಾಳ್ಯದ ಸರ್ವೆ ನಂಬರ್ ೪೬ ಹಾಗು ಸರ್ವೆ ನಂಬರ್ ೪೭ರಲ್ಲಿ ಇಪ್ಪತ್ತೊಂದು ಎಕರೆ ಜಮೀನು ಕೆರೆ ಖರಾಬು ಹಾಗು ಗೋಮಾಳಕ್ಕೆ ಸೇರಿದೆ. ಕಳೆದ ೨೦೦೦ ಮತ್ತು ೨೦೦೨ರಲ್ಲಿ ಕೃಷ್ಣ ಬೈರೇಗೌಡರ ಕುಟುಂಬ ಹೆಸರಿಗೆ ದಾಖಲಾಗಿದೆ. ಕೆರೆ ಹಾಗು ಸ್ಮಶಾನದ ಭೂಮಿಯನ್ನು ಸರ್ಕಾರದ ನಿಯಮಗಳ ಪ್ರಕಾರ ಯಾರಿಗೂ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ತಾವೊಬ್ಬ ಪ್ರಾಮಾಣಿಕ ರಾಜಕಾರಣಿ ಎಂದು ಹೇಳುವ ಕೃಷ್ಣ ಬೈರೇಗೌಡರು ಕಂದಾಯ ಭೂಮಿಯನ್ನು ಅಕ್ರಮವಾಗಿ ತಮ್ಮ ಕುಟುಂಬದ ಹೆಸರಿಗೆ ಮಾಡಿಸಿಕೊಂಡಿದ್ದಾರೆೆ ಎಂದು ಆರೋಪಿಸಿದ್ದರು.
ಬಿ.ಜೆ.ಪಿಯ ಆರೋಪಗಳನ್ನು ಅಲ್ಲಗೆಳೆದ ಸಚಿವ ಕೃಷ್ಣ ಬೈರೇಗೌಡರು ಬಿ.ಜೆ.ಪಿಯವರು ತೀಟೆಗಾಗಿ ಆರೋಪ ಮಾಡಿದ್ದಾರೆ. ಗರುಡಪಾಳ್ಯದ ಜಮೀನು ಮೂಲತಃ ಮೈಸೂರು ಮಹಾರಾಜರಿಗೆ ಸೇರಿದ್ದು, ೧೯೨೩ರಲ್ಲಿ ಮಹಾರಾಜರು ಜಮೀನು ಖರೀದಿ ಮಾಡಿ ಅಲ್ಲಿ ಕೃಷಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದರು. ವಿದೇಶದಿಂದ ರಾಸಾಯನಿಕ ಗೊಬ್ಬರ ಆಮದು ಮಾಡಿಕೊಂಡು ರೈತರಿಗೆ ತರಬೇತಿ ಕೇಂದ್ರದಲ್ಲಿ ಪರಿಚಯಿಸಲಾಗುತ್ತಿತ್ತು. ಜಮೀನನ್ನು ನಾರಾಯಣಸ್ವಾಮಿ ಎಂಬುವರು ನೋಡಿಕೊಳ್ಳುತ್ತಿದ್ದರು. ನಮ್ಮ ತಾತ ಚೌಡೇಗೌಡರಿಗೆ ೧೯೫೩ರಲ್ಲಿ ೧೦ ವರ್ಷಗಳ ಕಾಲ ಭೋಗ್ಯಕ್ಕೆ ನೀಡಿದ್ದರು. ಅವಧಿ ಮುಗಿಯುವ ಮೊದಲೇ ರಾಜ ಮನೆತನದವರು ಭೂಮಿಯನ್ನು ಮಾರಾಟಕ್ಕೆ ಇಟ್ಟಿದ್ದರು. ಆದರೆ ಹಣ ಹೊಂದಿಸಲಾಗದೆ. ನಮ್ಮ ತಾತನವರು ಆಗ ಜಮೀನು ಖರೀದಿ ಮಾಡಲಿಲ್ಲ. ಆ ಜಮೀನನ್ನು ಜಮೀನನ್ನು ಅವರು ೧೯೫೯ರಲ್ಲಿ ಅಬೀಬುಲ್ಲಾಖಾನ್ ಎಂಬುವರಿಗೆ ಮಾರಾಟ ಮಾಡಿದ್ದರು. ನಮ್ಮ ತಾತನವರು ಕೋಲಾರ ವಿಶೇಷ ಜಿಲ್ಲಾಧಿಕಾರಿಗಳ ಬಳಿ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ವಿಶೇಷ ಜಿಲ್ಲಾಧಿಕಾರಿಗಳು ಅಬೀಬುಲ್ಲಾಖಾನ್ ಜಮೀನಿನ ಮಾಲೀಕರು ಎಂದು ತೀರ್ಪು ನೀಡಿದರು.
ಆ ನಂತರ ನಮ್ಮ ತಾತ ಚೌಡೇಗೌಡರು ಮೈಸೂರು ಅಪಿಲೇಟ್ ಟ್ರಿಬುನಲ್‌ನಲ್ಲಿ ಮೇಲ್ಮನವಿ ದಾಖಲಿಸಿದ್ದರು. ಆನಂತರ ಅಬೀಬುಲ್ಲಾ ಖಾನ್ ಅವರು ಸಂದಾನಕ್ಕೆ ಬಂದು ಗರುಡುಪಾಳ್ಯದ ಸಂಪೂರ್ಣ ೨೫೬ ಎಕರೆ ಒಡೆತನವನ್ನು ಸೇಲ್ ಡೀಡ್ ಮೂಲಕ ನಮ್ಮ ತಾತ ಚೌಡೇಗೌಡರರಿಗೆ ಮಾರಾಟ ಮಾಡಿದರು.
ಈ ಜಮೀನಿನಲ್ಲಿ ಎರಡು ಕೆರೆಗಳಿಗೆ ಇವೆ. ಆ ಕೆರಗಳು ಈಗಲೂ ಅಸ್ತಿತ್ವದಲ್ಲಿದೆ. ಕೆರೆಗಳ ಜಮೀನನ್ನು ಒತ್ತುವರಿ ಮಾಡಿಲ್ಲ ಎಂದು ಕೃಷ್ಣಬೈರೇಗೌಡ ಸ್ಪಷ್ಟಪಡಿಸಿದ್ದಾರೆ.
ಬಿ.ಜೆ.ಪಿ ಮುಖಂಡರು ಆರೋಪ ಮಾಡಿರುವಂತೆ ಸರ್ಕಾರದ ಆಸ್ಥಿಯಲ್ಲ. ನಾನು ಯಾವುದೇ ರೀತಿಯ ತನಿಖೆ ಎದುರಿಸಲು ಸಿದ್ದ ಎಂದು ಸವಾಲು ಹಾಕಿದ್ದರು.
ಆದರೆ ಆನಂತರ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಳೆದ ೨೫ ೦೭ ೨೦೨೫ರಲ್ಲಿ ಕೋಲಾರ ತಾಶೀಲ್ದಾರ್‌ರವರಿಗೆ ಪತ್ರ ಬರೆದು ಕೋಲಾರ ತಾಲ್ಲೂಕಿನ ನರಸಾಪುರ ಹೋಬಳಿಯ ಗರುಡಪಾಳ್ಯ ಗ್ರಾಮಕ್ಕೆ ಸೇರಿದ ಗೋಮಾಳ, ಖರಾಬು ಕೆರೆ ಸೇರಿದಂತೆ ಗ್ರಾಮದ ಒಟ್ಟು ವಿಸ್ತೀರ್ಣ ಹಾಗು ಯಾರ ಹೆಸರಿಗೆ ಖಾತೆ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದರು.
ನಾರಾಯಣಸ್ವಾಮಿಯವರು ಕೇಳಲಾದ ಮಾಹಿತಿ ಕೃಷ್ಣಬೈರೇಗೌಡರ ಕುಟುಂಬಕ್ಕೆ ಸೇರಿದ ಆಸ್ತಿ ಆಗಿದೆ. ಕಳೆದ ನಾಲ್ಕು ದಿನಗಳಿಂದ ನಾರಾಣಸ್ವಾಮಿಯವರು ಕೋಲಾರ ತಾಶೀಲ್ದರ್‌ರವರಿಗೆ ಬರೆಯಲಾಗಿದ್ದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಿ.ಜಿ.ಪಿ ಮುಖಮಂಡರಿಗೆ ನಾರಾಯಣಸ್ವಾಮಿಯವರಿಗೆ ದಾಖಲೆಗಳನ್ನು ಒದಗಿಸಿದ್ದಾರೆ ಎಂಬ ಬಲವಾದ ಅನುಮಾನ ಎದುರಾಗಿದೆ.ಪತ್ರ ಬಹಿರಂಗಗೊಳ್ಳತ್ತಿದ್ದ0ತೆ ನಾರಾಯಣ ಸ್ವಾಮಿ ತೀವ್ರ ಮುಹುಜುಗರಕ್ಕೆ ಒಳಗಾಗಿದ್ದಾರೆ. ನಾನು ಕೋಲಾರ ತಾಶೀಲ್ದಾರ್‌ರವರಿಗೆ ಪತ್ರ ಬರೆದಿಲ್ಲ. ನನ್ನ ಲೆಟರ್ ಹೆಡ್ ಯಾರೋ ದುರುಪಯೋಗ ಪಡಿಸಿಕೊಂಡು ನನ್ನ ಸಹಿಯನ್ನು ಫೋರ್ಜರಿ ಮಾಡಲಾಗಿದೆ. ಕೃಷ್ಣ ಬೈರೆಗೌಡರ ಆಸ್ತಿಯ ವಿವರಗಳನ್ನು ಪಡೆಯುವ ಅಗತ್ಯ ನನಗಿಲ್ಲ ಎಂದು ಆರೋಪವನ್ನು ನಿರಾಕರಿಸಿದ್ದಾರೆ.
ನಾನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ವಿರಧ್ಧ ಮಾತನಾಡಿದ್ದೇನೆ. ಅವರು ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ಧಾರೆ.ಅವರನ್ನು ವರ್ಗಾವಣೆ ಮಾಡುವಂತೆ ಸಹಿ ಸಂಗ್ರಹ ಮಾಡಿದ್ದೆ.ನಾನು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುಧ್ಧ ಸಹಿ ಸಂಗ್ರಹ ಮಾಡಿಲ್ಲ ಎಂದು ಮುಜುಗರದಿಂದ ಪಾರಾಗಲು ಯತ್ನಿಸಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಅಕ್ಕಯ್ಯನ ದಿನ್ನೆ ಗ್ರಾಮಕ್ಕೆ ಸೇರಿದ ಕರಾಬು ಜಮೀನನ್ನು ಕಾನ್ಪಿಡೆಂಟ್ ಗ್ರೂಪ್ ಒತ್ತುವರಿ ಮಾಡಿದೆ. ಡಿ.ಕೆ. ರವಿ ಜಿಲ್ಲಾಧಿಕಾರಿಗಳಾಗಿದ್ದಾಗ ಒತ್ತುವರಿ ತೆರವುಗೊಳಿಸಿದ್ದರು. ಅಲ್ಲದೆ ಕಾನ್ಫಡೆಂಟ್ ಗ್ರೂಪ್ ಹೆಸರಿನಲ್ಲಿ ಮಾಡಲಾಗಿದ್ದ ಖಾತೆಯನ್ನು ರದ್ದುಪಡಿಸಿದ್ದರು. ಆ ನಂತರ ಕಾನ್ಫೆಡೆಂಟ್ ಗ್ರೂಫ್ ಹೈ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಕರಾಬು ಜಮೀನನ್ನು ಕಾನ್ಫೆಡೆಂಟ್ ಗ್ರೂಪ್‌ಗೆ ಮಂಜೂರು ಮಾಡುವಂತೆ ಸದನದಲ್ಲಿ ಶಾಸಕ ನಾರಾಯಣಸ್ವಾಮಿ ಒತ್ತಾಯಿಸಿದ್ದರು.
ಆದರೆ, ಕೃಷ್ಣಭೈರೇಗೌಡ ನಿಯಮಗಳಲ್ಲಿ ಅವಕಾಶವಿಲ್ಲವೆಂದು ನಿರಾಕರಿಸಿದ್ದರು. ಕೋಲಾರ ತಾಲ್ಲೂಕಿನ ಹೊಳಲಿ ಬಳಿ ಕೋಲಾರ ಹಾಲು ಉತ್ಪಾದಕರ ಒಕ್ಕೂಟಕ್ಕೆ ಮೇವು ಬೆಳೆಯಲು ೫೦ ಎಕರೆ ಜಮೀನನ್ನು ಜಿಲ್ಲಾಧಿಕಾರಿಗಳು ಮಂಜೂರು ಮಾಡಿದ್ದಾರೆ.
ಮೇವು ಬೆಳೆಯುವ ಬದಲು ಸೋಲಾರ್ ಪ್ಲಾಂಟ್ ಅಕ್ರಮವಾಗಿ ಸ್ಥಾಪಿಸಲಾಗಿದೆ. ಜಮೀನು ಭೂ ಪರಿವರ್ತನೆಯಾಗಿಲ್ಲ. ಮಂಜೂರಾತಿ ರದ್ದುಪಡಿಸಬೇಕೆಂದು ಸದನದಲ್ಲಿ ಒತ್ತಾಯಿಸಿದ್ದರು.
ಕೋಮುಲ್ ರೈತರ ಸಂಸ್ಥೆಯಾಗಿದೆ. ಸಹಾಯಕ ಕಮೀಷನರ್‌ರವರಿಂದ ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ಕೃಷ್ಣಭೈರೇಗೌಡ ಸದನದಲ್ಲಿ ಉತ್ತರ ನೀಡಿದ್ದರು. ಇದರಿಂದಾಗಿ ಎಸ್.ಎನ್.ನಾರಾಯಣಸ್ವಾಮಿ ತೀವ್ರ ಅಸಮದಾನಗೊಂಡಿದ್ದರು.
ನಾರಾಯಣಸ್ವಾಮಿಯವರು ದಾಖಲೆಗಳು ನೀಡುವಂತೆ ಕೋಲಾರ ತಹಶೀಲ್ದಾರ್ ರವರಿಗೆ ಜುಲೈ ತಿಂಗಳಲ್ಲಿ ಪತ್ರ ಬರೆದಿದ್ದರು. ಆ ನಂತರ ಸಾಮಾಜಿಕ ಹೋರಾಟಗಾರ ಡಿ.ಮುನೇಶ್ ಕೃಷ್ಣಬೈರೇಗೌಡರು ಅಕ್ರಮವಾಗಿ ಕೆರೆ ಹಾಗೂ ಗೋಮಾಳ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಮುನೇಶ್ ಹಾಗೂ ಎಸ್.ಎನ್.ನಾರಾಯಣಸ್ವಾಮಿ ನಡುವೆ ಒಳ್ಳೆಯ ಸಂಬ0ಧವಿದೆ. ಮುನೇಶ್ ಮೂಲಕ ಈ ದಾಖಲೆಗಳನ್ನು ನಾರಾಯಣಸ್ವಾಮಿ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ವಿಪರ್ಯಾಸವೆಂದರೆ ಬಿಜೆಪಿ ರವರು ಮಾಡಿರುವ ಆರೋಪಗಳು ಹೊಸ ತಿರುವು ಪಡೆದು ಎಸ್.ಎನ್.ನಾರಾಯಣಸ್ವಾಮಿ ದಾಖಲೆಗಳನ್ನು ಅವರಿಗೆ ನೀಡಿರಬಹುದೆಂದು ಶಂಕಿಸಲಾಗಿದೆ.
ಚಿತ್ರ : ಕೋಲಾರ ತಾಲ್ಲೂಕಿನ ಗರುಡುಪಾಳ್ಯ ಗ್ರಾಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಸೇರಿರುವ ಜಮೀನುಗಳ ಮಾಹಿತಿ ನೀಡುವಂತೆ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕೋಲಾರ ತಹಶೀಲ್ದಾರ್ ರವರಿಗೆ ಬರೆದಿರುವ ಪತ್ರ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್