ಕೋಲಾರ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗೆ ಚಾಲನೆ
ಕೋಲಾರ ಜಿಲ್ಲಾ ಮಟ್ಟದ ಶಿಕ್ಷಕರ ಸಹಪಠ್ಯಚಟುವಟಿಕೆಗಳ ಸ್ಪರ್ಧೆಗೆ ಚಾಲನೆ
ಕೋಲಾರದ ಮೆಥೋಡಿಸ್ಟ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಿವೈಪಿಸಿ ರಾಜೇಶ್ವರಿ ಬಹುಮಾನ ವಿತರಿಸಿದರು.


ಕೋಲಾರ, ೨೨ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಶಿಕ್ಷಕರು ತಮ್ಮಲ್ಲಿನ ಪ್ರತಿಭೆಯನ್ನು ಬದ್ದತೆ, ಪ್ರಾಮಾಣಿಕತೆಯಿಂದ ಮಕ್ಕಳಿಗೆ ಧಾರೆಯೆರೆಯುವ ಕಾಯಕದಲ್ಲಿ ಸದಾ ಮಗ್ನರಾದಾಗ ಮಾತ್ರ ಸಾಧಕ ವಿದ್ಯಾರ್ಥಿಗಳನ್ನು ತಯಾರಿಸಲು ಸಾಧ್ಯವಾಗುತ್ತದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಮಗ್ರ ಶಿಕ್ಷಣ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ರಾಜೇಶ್ವರಿ ಅಭಿಪ್ರಾಯಪಟ್ಟರು.

ನಗರದ ಮೆಥೋಡಿಸ್ಟ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಜಿಲ್ಲಾಮಟ್ಟದ ಸ್ಪರ್ಧೆಗಳಿಗೆ ಚಾಲನೆ ನೀಡಿದ ನಂತರ ವಿಜೇತ ಶಿಕ್ಷಕರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಮಕ್ಕಳಲ್ಲಿ ಕಲಿಕಾಸಕ್ತಿ ಬೆಳೆಸುವ ಕಾಯದದ ಒತ್ತಡದಲ್ಲೇ ಸದಾ ಮಗ್ನರಾಗಿರುವ ಶಿಕ್ಷಕರ ಪ್ರತಿಭಾ ಪ್ರದರ್ಶನಕ್ಕೆ ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ, ಇಲ್ಲಿ ಹೊರ ಬರುವ ಪ್ರತಿಭೆಗೆ ಪುರಸ್ಕಾರ ಸಿಗುತ್ತದೆ ಆದರೆ ಅದೇ ಪ್ರತಿಭೆಯನ್ನು ಮಕ್ಕಳಿಗೆ ನೀವು ಧಾರೆಯೆರೆದಾಗ ಸಿಗುವ ಸಂತೃಪ್ತಿ ಹೆಚ್ಚಿನದು ಎಂದರು.

ಶೈಕ್ಷಣಿಕ ಪ್ರಗತಿ ಇಂದು ಅತಿ ಮುಖ್ಯವಾಗಿದೆ, ಸರ್ಕಾರಿ ಶಾಲೆಗಳು ಉಳಿಯಲು ನಿಮ್ಮ ಪ್ರಯತ್ನ ಬೇಕು, ಖಾಸಗಿ ಶಾಲೆಗಳಿಗಿಂತ ಹೆಚ್ಚು ಗುಣಾತ್ಮಕ ಕಲಿಕೆ ನಿಮ್ಮಿಂದ ನೀಡಲು ಸಾಧ್ಯವಿದೆ. ಸದಾ ಮಕ್ಕಳಲ್ಲಿನ ಪ್ರತಿಭೆ ಅನಾವರಣಕ್ಕೆ ನೀವು ಪ್ರಯತ್ನ ನಡೆಸುತ್ತೀರಿ, ಆದರೆ ಇದೀಗ ಶಿಕ್ಷರಾದ ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ಮಾತನಾಡಿ, ಶಿಕ್ಷಕರಲ್ಲಿ ಪ್ರತಿಯೊಬ್ಬರಲ್ಲೂ ಒಂದೊAದು ಕಲೆ ಅಡಗಿರುತ್ತದೆ ಆದರೆ ಅದಕ್ಕೆ ಸೂಕ್ತ ವೇದಿಕೆ ಸಿಗುವುದಿಲ್ಲ ಎಂಬ ನೋವು ಇದ್ದೇ ಇತ್ತು, ನಿಮಗಾಗಿ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಸೋಲು-ಗೆಲುವಿನ ಲೆಕ್ಕಾಚಾರ ಹಾಕದೇ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದರು.

ಮಕ್ಕಳಿಗಾಗಿ ಪ್ರತಿಭಾ ಕಾರಂಜಿ ಸಾಮಾನ್ಯ ಅದರೆ ಈಗ ನಡೆಯುತ್ತಿರುವುದು ಶಿಕ್ಷಕರ ಪ್ರತಿಭಾ ಕಾರಂಜಿ, ಇಲ್ಲಿ ನಿಮ್ಮಲ್ಲಿ ಅಡಗಿರುವ ಪ್ರತಿಭೆ ಕಾರಂಜಿಯಾಗಿ ಹೊರ ಬರಬೇಕು, ಅದಕ್ಕೆ ಪುರಸ್ಕಾರ ಸಿಗಲಿದೆ, ಜತೆಗೆ ಇದೇ ಪ್ರತಿಭೆಯನ್ನು ಶಾಲೆಯಲ್ಲಿ ನಿಮ್ಮನ್ನು ನಂಬಿರುವ ಮಕ್ಕಳಿಗೆ ಹರಿಸಬೇಕು ಎಂದರು.

ಸ್ಪರ್ಧೆಗಳ ನೋಡಲ್ ಅಧಿಕಾರಿ ಸಮೀವುಲ್ಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ನಡೆಸುತ್ತಿದ್ದು, ಭಕ್ತಿಗೀತೆ, ಆಶುಭಾಷಣಸ್ಪರ್ಧೆ, ಕನ್ನಡಪ್ರಬಂಧ ಸ್ಪರ್ಧೆ, ಸ್ಥಳದಲ್ಲೇ ಪಾಠೋಪಕರಣಗಳ ತಯಾರಿಕಾ ಸ್ಪರ್ಧೆ, ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ, ರಸಪ್ರಶ್ನೆ ಸಾಮಾನ್ಯಜ್ಞಾನ, ರಸಪ್ರಶ್ನೆ ವಿಜ್ಞಾನ ಈ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಷಯ ಪರಿವೀಕ್ಷಕಿ ಬಬಿತಾ, ಇಸಿಒಗಳಾದ ಮುನಿರತ್ನಯ್ಯಶೆಟ್ಟಿ, ರಾಧಾ, ನಂಜು0ಡಗೌಡ, ನಾಗರಾಜ್, ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ, ಕಾರ್ಯದರ್ಶಿ ಗಂಗಾಧರಮೂರ್ತಿ, ಮುಖ್ಯಶಿಕ್ಷಕ ಸಿದ್ದೇಶ್, ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಮುನಿರಾಜು, ಪ್ರವೀಣ್ ಮತ್ತಿತರಿದ್ದು,ತೀರ್ಪುಗಾರರಗಿ ಪ್ರಸನ್ನವೆಂಕಟೇಶ್, ಲಕ್ಷಿö್ಮ, ಭವಾನಿ, ಸಿದ್ದೇಶ್, ಎನ್.ಎಸ್.ಭಾಗ್ಯ, ಸೋಮಶೇಖರ್,ಡಿ.ಎ.ರಾಜಣ್ಣ, ಬಿ.ಕೆ.ನಾಗರಾಜ್, ವೆಂಕಟಪ್ಪ, ವೇಣುಗೋಪಾಲ್. ಕೆ.ಎಸ್.ಮುನಿರಾಜು, ಕಾಳಿದಾಸ ಸಮಿತ್ರ ಮರಾಠೆ, ಗಂಗಾಧರಮೂರ್ತಿ, ಅನಂದಕುಮಾರ್, ರಾಘವೇಂದ್ರ, ದೇವರಾಜ್, ರಾಧಮ್ಮ ಕಾರ್ಯನಿರ್ವಹಿಸಿದರು.

ಪ್ರಾಥಮಿಕ ವಿಭಾಗದಲ್ಲಿ ಭಕ್ತಿಗೀತೆ-ಮಾಲೂರಿನ ದಿನ್ನೇರಿ ಶಾಲೆ ರಾಮಚಂದ್ರ, ಭಾವಗೀತೆ, ಆಶುಭಾಷಣ ಸ್ಪರ್ಧೆ-ಶ್ರೀನಿವಾಸ್ ಎಂಎನ್. ಶಾನಭೋಗನಹಳ್ಳಿ ಶಾಲೆ, ಪ್ರಬಂಧ- ರೂಪ ವಿ. ಗಾಂಡ್ಲಹಳ್ಳಿ ಶಾಲೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ- ಮುನಿರಾಜು ಐತರಾಸನಹಳ್ಳಿ ಶಾಲೆ, ಚಿತ್ರಕಲೆ- ಮೊಹಸೀನಾ ಭಾನು ಸರ್ಕಾರಿ ಶಾಲೆ ಎಂಸಿಹಳ್ಳಿ ಮಾಲೂರು, ರಸಪ್ರಶ್ನೆ ಸಾಮನ್ಯ- ವಿಜಯಕುಮಾರ್ ಮಾಲೂರು ಪಟ್ಟಣ ಸರ್ಕಾರಿ ಶಾಲೆ, ರಸಪ್ರಶ್ನೆ ವಿಜ್ಞಾನ- ಕೋಲಾರ ತಾಲ್ಲೂಕಿನ ಕುರಗಲ್ ಪ್ರಾಥಮಿಕ ಶಾಲೆ,

ಪ್ರೌಢಶಾಲಾ ವಿಭಾಗದಲ್ಲಿ ಭಕ್ತಿಗೀತೆ ಅಶ್ವಿನಿ ಗಾಂವ್ಕರ್, ಮೊರಾರ್ಜಿಶಾಲೆ ಮದನಹಳ್ಳಿ ಆಶುಭಾಷಣ-ವೆಂಕಟರಮಣಪ್ಪ ಎಂ.ಕೆ. ಜಿಹೆಚ್‌ಎಸ್ ಲಕ್ಷಿö್ಮÃಪುರ, ಪ್ರಬಂಧ-ಶಿಲ್ಪ ಆರ್. ಮಾಸ್ತೇನಹಳ್ಳಿ ಶಾಲೆ, ಸ್ಥಳದಲ್ಲೇ ಪಾಠೋಪಕರಣ ತಯಾರಿಕೆ-ವೈ.ವಿ.ಚಂದ್ರಶೇಖರ್ ಹುತ್ತೂರು ಪ್ರೌಢಶಾಲೆ, ಚಿತ್ರಕಲೆ- ಮುನಿಕೃಷ್ಣ ಆರ್. ಮೊರಾರ್ಜಿದೇಸಾಯಿ ವಸತಿ ಶಾಲೆ ಮಾಲೂರು. ರಸಪ್ರಶ್ನೆ ಸಾಮಾನ್ಯ-ರಾಜಾರೆಡ್ಡಿ ಬೇತಮಂಗಲ ಸರ್ಕಾರಿ ಪ್ರೌಢಶಾಲೆ, ರಸಪ್ರಶ್ನೆ ವಿಜ್ಞಾನ-ಉರಿಗಾಂಪೇಟೆ ಸರ್ಕಾರಿ ಪ್ರೌಢಶಾಲೆ.

ಚಿತ್ರ ; ಕೋಲಾರದ ಮೆಥೋಡಿಸ್ಟ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಿವೈಪಿಸಿ ರಾಜೇಶ್ವರಿ ಬಹುಮಾನ ವಿತರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande