
ಬಳ್ಳಾರಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಉಚ್ಛತಮ ಶಿಕ್ಷಣ ಅಭಿಯಾನ (ರುಸಾ) ಪ್ರಾಯೋಜಕತ್ವದಲ್ಲಿ ಒಂದು ದಿನದ `ಕ್ಲೈಮೇಟ್ ಚೇಂಜ್ ಅಂಡ್ ಎನ್ವಿರಾನ್ಮೆಂಟಲ್ ಸಸ್ಟೇನಬಿಲಿಟಿ’ ವಿಷಯವಾಗಿ ರಾಷ್ಟ್ರಮಟ್ಟದ ಭೌತಶಾಸ್ತ್ರ ಸಮ್ಮೇಳನವು ನಾಳೆ ಬೆಳಿಗ್ಗೆ 10.00 ಗಂಟೆಗೆ ನಡೆಯಲಿದೆ.
ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿ ನಗರದ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ನಾರಾ ಭರತ್‍ರೆಡ್ಡಿ, ಅತಿಥಿಗಳಾಗಿ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಕು. ಮಂಜುಶ್ರೀ ಎನ್, ನಿರ್ದೇಶಕರಾದ ಡಾ. ಶೋಭಾ ಜಿ, ಬಳ್ಳಾರಿಯ ವಿ.ಎಸ್.ಕೆ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಂ. ಮುನಿರಾಜು, ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಪ್ರಹ್ಲಾದ್ ಚೌದ್ರಿ, ರಾಷ್ಟ್ರೀಯ ಸಲಹಾ ಮಂಡಳಿಯ ಹಾಗೂ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಮಗೋಪಾಲ್, ವಿ.ಎಸ್.ಕೆ. ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಜೆ, ತೆಲಂಗಾಣದ ವಾರಂಗಲ್‍ನ ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಪಿ. ಅಬ್ದುಲ್ ಅಜೀಮ್, ಕೇರಳದ ತಿರುವನಂತಪುರಂನ ಇಸ್ರೋ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯದ ವಿಜ್ಞಾನಿ ಡಾ. ಸುರೇಶ್ ಕುಮಾರ್ ರೆಡ್ಡಿ ಬಿ, ಭಾಗವಹಿಸಲಿದ್ದಾರೆ.
ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಸ್ವಾಯತ್ತ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಮ್ಮೇಳನದ ಸಂಚಾಲಕರಾದ ಡಾ. ಮಂಜುನಾಥ ಎಸ್, ಸಂಘಟನಾ ಕಾರ್ಯದರ್ಶಿಯಾದ ಡಾ. ಕುಂಚಂ ನರಸಿಂಹುಲು, ಸಂಘಟನಾ ಸದಸ್ಯರಾದ ಡಾ. ರಮಾಬಾಯಿ, ಡಾ. ಶಿಲ್ಪಾ ಕುಲಕರ್ಣಿ, ಡಾ. ಟಿ. ದೊಡ್ಡಬಸವರಾಜ ಅವರು ಸಮ್ಮೇಳನದಲ್ಲಿ ಉಪಸ್ಥಿತರಿರಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್