
ಬಳ್ಳಾರಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಿಯಕರನ ಕಿರುಕುಳದಿಂದ ಬೇಸತ್ತ ವಿವಾಹಿತೆ ತನ್ನ ನೋವನ್ನು ವೀಡಿಯೋಮಾಡಿ ಲೈವ್‍ನಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಹುಸೇನ್ ನಗರದಲ್ಲಿ ಸೋಮವಾರ ನಡೆದಿದೆ.
ಮೃತಳು ಮುನ್ನಿ (23). ಈಕೆಯು ವಿವಾಹವಾಗಿ ಎರೆಡು ಮಕ್ಕಳ ತಾಯಿ ಆಗಿ ಆರು ತಿಂಗಳಿಂದ ಪತಿಯನ್ನು ಬಿಟ್ಟು ಹುಸೇನ್ ನಗರದಲ್ಲಿ ನೆಲೆಸಿದ್ದಳು. ಈ ಮಧ್ಯೆ ಮೊಹಮ್ಮದ್ ಶೇಖ್ ಎನ್ನುವ ಯುವಕನ ಜೊತೆ ಅನ್ಯೋನ್ಯವಾಗಿದ್ದಳು. ಆದರೆ, ಈ ಯುವಕನ ಜೊತೆಯಲ್ಲಿ ಮುನ್ನಿ ಕಿರಿಕಿರಿಯಾಗಿದ್ದ ಕಾರಣ ಇಬ್ಬರ ಮಧ್ಯೆ ಪರಸ್ಪರ ವೈಮನಸ್ಸು ಉಂಟಾಗಿತ್ತು.
ಕಾರಣ ಮುನ್ನಿ ವೀಡಿಯೋ ಮಾಡಿ, ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮುನ್ನಿ ಕುಟುಂಬದ ಸದಸ್ಯರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್