
ಬಳ್ಳಾರಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಬಳ್ಳಾರಿಯ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಪ್ಪಳದ ಶಿವರಾಜ ರಾಮು ಭಜಂತ್ರಿ (37) ಅವರು ಕಾಣೆಯಾಗಿದ್ದಾರೆ.
ಭಜಂತ್ರಿ ಅವರು ಡಿಸೆಂಬರ್ 18 ರಂದು ಬಳ್ಳಾರಿಯ ಜನತಾ ನಗರದಲ್ಲಿ ಇರುವ ಕಾಟೇಗುಡ್ಡ ಮಾರೆಮ್ಮ ದೇವಸ್ಥಾನಕ್ಕೆ ಅಕ್ಕಿ ಕೊಟ್ಟು ಬರುತ್ತೇನೆಂದು ಹೇಳಿ ಹೋದವರು ತಿರುಗಿ ಬಂದಿಲ್ಲ ಎನ್ನಲಾಗಿದೆ.
ಎತ್ತರ ಅಂದಾಜು 6 ಅಡಿ, ದುಂಡು ಮುಖ, ಧೃಡವಾದ ಮೈಕಟ್ಟು ಹೊಂದಿದ್ದು, ಹಣೆ ಮತ್ತು ಬಲಗೈ ಮೇಲೆ ಹಳೆಯ ಗಾಯದ ಗುರುತು ಹಾಗೂ ಬಲಕಣ್ಣಿನ ಬಳಿ ಬಿಳಿ ಬಣ್ಣದ ನರುಳಿ ಇದೆ. ಎಡಗೈ ಬೆರಳಿಗೆ 5 ಗ್ರಾಂ ತೂಕದ ಜೆ ಅಕ್ಷರವಿರುವ ಬಂಗಾರದ ಉಂಗುರವಿದೆ. ಕೆಎ 26-ಇಸಿ-1888 ನಂಬರ್ ಇರುವ ಪರ್ಪಲ್ ಬಣ್ಣದ ಟಿವಿಎಸ್ ಜೂಪಿಟರ್ ಸ್ಕೂಟರ್‍ನ್ನು ತೆಗೆದುಕೊಂಡು ಹೋಗಿರುತ್ತಾನೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಪುಲ್ ಶರ್ಟ್, ಬಿಳಿ ಕಟ್ ಬನಿನ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಅಥವಾ ಎಪಿಎಂಸಿ ಯಾರ್ಡ್ ಪೆÇಲೀಸ್ ಠಾಣೆಯ ದೂ.08392-250033, ಮೊ.948080396 ಗೆ ಸಂಪರ್ಕಿಸಬಹುದಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್