ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿAದ ಕಾರ್ಮಿಕರಿಗೆ ಕಿರುಕುಳ ವಿರೋಧಿಸಿ ಸಿ.ಐ.ಟಿ.ಯು. ಪ್ರತಿಭಟನೆ
ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿAದ ಕಾರ್ಮಿಕರಿಗೆ ಕಿರುಕುಳ ವಿರೋಧಿಸಿ ಸಿ.ಐ.ಟಿ.ಯು. ಪ್ರತಿಭಟನೆ
ಕೋಲಾರ ಜಿಲ್ಲೆ ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿAದ ಕಾರ್ಮಿಕರಿಗೆ ಕಿರುಕುಳ ವಿರೋಧಿಸಿ ಸಿ.ಐ.ಟಿ.ಯು. ಆಶ್ರಯದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.


ಕೋಲಾರ, ೨೨ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಜಿಲ್ಲೆಯ ಮಾಲೂರು ಕೈಗಾರಿಕಾ ಪ್ರದೇಶದ ಯುಕೆನ್ ಇಂಡಿಯಾ ಲಿಮಿಟೆಡ್ ಪೋಸ್ಟ್ ಕಂಪನಿಯಿ0ದ ಕಾರ್ಮಿಕರಿಗೆ ಕಿರುಕುಳ ಹಾಗೂ ದುರುದ್ದೇಶದಿಂದ ತೊಂದರೆ ಕೊಡುತ್ತಿದ್ದು ಕೂಡಲೇ ಜಿಲ್ಲಾಧಿಕಾರಿ ಎಂ.ಆರ್ ರವಿ ಮಧ್ಯಪ್ರವೇಶಿಸಿ ಕಾರ್ಮಿಕರ ಹಿತ ಕಾಪಾಡುವಂತೆ ಸೋಮವಾರ ಸಿಐಟಿಯು ನೇತೃತ್ವದ ಬೆಂಗಳೂರು ಈಸ್ಟ್ ಇಂಡಸ್ಟ್ರಿಯಲ್ ವರ್ಕರ್ಸ್ ಯೂನಿಯನ್ ನೇತೃತ್ವದಲ್ಲಿ ಕಾರ್ಮಿಕರು, ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಸಿಐಟಿಯು ಸಂಘಟನೆಯ ರಾಜ್ಯ ಉಪಾಧ್ಯಕ್ಷ ಹೆಚ್ ಎನ್ ಗೋಪಾಲಗೌಡ ಮಾತನಾಡಿ ಯುಕೆನ್ ಲಿಮಿಟೆಡ್ ಕಂಪನಿಯು ಅಕ್ರಮವಾಗಿ ಕಾರ್ಮಿಕರ ನಡವಳಿಕೆ ಅನುಸರಿಸಿ ಸಂಸ್ಥೆಯ ಖಾಯಂ ನೌಕರರಿಗೆ ಕಿರುಕುಳ ನೀಡಿ ವಿನಾಕಾರಣ ದೂರದ ಹರ್ಯಾಣಗೆ ವರ್ಗಾವಣೆ ಮಾಡುವ ಜೊತೆಗೆ ವೇತನ ಕಡಿತಗೊಳಿಸಿದ್ದಾರೆ ಕಾರ್ಮಿಕ ವಿರೋಧಿ ನೀತಿಗಳ ಜಾರಿಯಿಂದ ಆಡಳಿತ ಮಂಡಳಿಯು ಕಾರ್ಮಿಕರನ್ನು ಜೀತದಾಳುಗಳ ರೀತಿಯಲ್ಲಿ ದುಡಿಸಿಕೊಳ್ಳುತ್ತಿದ್ದಾರೆ ಆಡಳಿತ ಮಂಡಳಿಯ ವಿರುದ್ದ ಪ್ರಶ್ನಿಸಿದಾಗ ಕಾರ್ಮಿಕರಿಗೆ ದೌರ್ಜನ್ಯ ಮತ್ತು ದಬ್ಬಾಳಿಕೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಸುಮಾರು ೪೦ ವರ್ಷಗಳ ಹಿಂದೆ ಪ್ರಾರಂಭವಾದ ಯುಕೆನ್ ಕಂಪನಿಯಲ್ಲಿ ಆಡಳಿತ ಮಂಡಳಿಯು ಅಕ್ರಮದ ಕಾರ್ಮಿಕ ನಡವಳಿಕೆಯಿಂದ ಕಾನೂನು ಬಾಹಿರವಾಗಿ ಕಾರ್ಮಿಕರನ್ನು ಹರ್ಯಾಣಕ್ಕೆ ವರ್ಗಾವಣೆ ಮಾಡಿದ್ದಾರೆ ಇದು ಅಲ್ಲದೇ ವರ್ಗಾವಣೆ ಹೆಸರಿನಲ್ಲಿ ಕಂಪನಿಯಿ0ದ ಹೊರಹಾಕುವ ಕಾರ್ಯವು ವ್ಯವಸ್ಥಿತವಾಗಿ ನಡೆಯುತ್ತಿದೆ ಸ್ಥಳೀಯವಾಗಿ ಇದ್ದವರನ್ನು ಕೆಲಸ ಬಿಡುವಂತೆ ಮಾಡಿದ್ದಾರೆ ಇತ್ತೀಚಿಗೆ ಹೊಸದಾಗಿ ಸೇರ್ಪಡೆಯಾದ ಕಾರ್ಮಿಕರ ಮಧ್ಯೆ ಒಗ್ಗಟ್ಟನ್ನು ಮುರಿಯುವ ಕೆಲಸ ಮಾಡಿದ್ದಾರೆ ಕಂಪನಿಯ ಆಡಳಿತ ಮಂಡಳಿಯ ಉದ್ದಟನ ಹಾಗೂ ಹಠಮಾರಿ ದೋರಣೆ ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.

ಕಂಪನಿಯ ಕಾರ್ಮಿಕ ವಿರೋಧಿ ನೀತಿಗಳಿಂದಾಗಿ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಿಸಿದ್ದರು ಇವು ಯಾವುದೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ದುಡಿಯುವ ವರ್ಗದ ಪರವಾಗಿ ಜಿಲ್ಲೆಯ ಜನಪರ, ದಲಿತ ಪರವಾದ ಸಂಘಟನೆಗಳು ಜೊತೆಗೆ ಇದ್ದು ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶದಿಂದ ಕಾರ್ಮಿಕರ ಹಿತ ಕಾಪಾಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ರಾಜ್ಯ ಕಾರ್ಯದರ್ಶಿ ಪಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕಾರ್ಯದರ್ಶಿ ಶಿವಾನಂದ್, ಖಜಾಂಚಿ ಹೆಚ್.ಬಿ ಕೃಷ್ಣಪ್ಪ, ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎಂ ವೆಂಕಟೇಶ್, ಜನವಾದಿ ಸುಶೀಲಾ, ಯುಕೆನ್ ಕಂಪನಿಯ ಮುಖಂಡರಾದ ರಾಮಮೋಹನ್, ರುದ್ರೇಶ್, ಶ್ರೀನಿವಾಸ್ ಭಟ್, ರವೀಂದ್ರ ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲೆ ಮಾಲೂರಿನ ಯುಕೆನ್ ಇಂಡಿಯಾ ಕಂಪನಿಯಿ0ದ ಕಾರ್ಮಿಕರಿಗೆ ಕಿರುಕುಳ ವಿರೋಧಿಸಿ ಸಿ.ಐ.ಟಿ.ಯು. ಆಶ್ರಯದಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande