ಹಂಪೆ ಶ್ರೀ ವಿರೂಪಾಕ್ಷನ ಪ್ರಾಂಗಣದಲ್ಲಿ ಭರತನಾಟ್ಯ ವೈಭವ
ಹಂಪೆ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಂಪೆಯ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ತಿಲ ಅಮಾವಾಸ್ಯೆ ಪ್ರಯುಕ್ತ ಭರತನಾಟ್ಯ ವೈಭವವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಅತ್ತಿಗುಪ್ಪೆಯ ಶ್ರೀಕಾಳಿಕಾಂಬಾ ಫೈನ್ ಆಟ್ರ್ಸ್ ಕಲಾವಿದರಿಂದ ಭರತನಾಟ್ಯದ ದಿವ್ಯ ನೃತ್ಯಾರ್ಪಣೆ ಪ್ರೇಕ್ಷಕರ ಮನಸೂ
ಹಂಪೆ ಶ್ರೀವಿರೂಪಾಕ್ಷನ ಪ್ರಾಂಗಣದಲ್ಲಿ ಭರತನಾಟ್ಯ ವೈಭವ


ಹಂಪೆ ಶ್ರೀವಿರೂಪಾಕ್ಷನ ಪ್ರಾಂಗಣದಲ್ಲಿ ಭರತನಾಟ್ಯ ವೈಭವ


ಹಂಪೆ ಶ್ರೀವಿರೂಪಾಕ್ಷನ ಪ್ರಾಂಗಣದಲ್ಲಿ ಭರತನಾಟ್ಯ ವೈಭವ


ಹಂಪೆ ಶ್ರೀವಿರೂಪಾಕ್ಷನ ಪ್ರಾಂಗಣದಲ್ಲಿ ಭರತನಾಟ್ಯ ವೈಭವ


ಹಂಪೆ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಂಪೆಯ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ತಿಲ ಅಮಾವಾಸ್ಯೆ ಪ್ರಯುಕ್ತ ಭರತನಾಟ್ಯ ವೈಭವವನ್ನು ಆಯೋಜಿಸಲಾಗಿತ್ತು.

ಬೆಂಗಳೂರಿನ ಅತ್ತಿಗುಪ್ಪೆಯ ಶ್ರೀಕಾಳಿಕಾಂಬಾ ಫೈನ್ ಆಟ್ರ್ಸ್ ಕಲಾವಿದರಿಂದ ಭರತನಾಟ್ಯದ ದಿವ್ಯ ನೃತ್ಯಾರ್ಪಣೆ ಪ್ರೇಕ್ಷಕರ ಮನಸೂರೆಗೊಂಡಿತು.

ಗುರು-ಭರತನಾಟ್ಯ ವಿದ್ಯುಷಿ ಬಿ.ಯು. ಮಾಣಿಕ್ಯಾದೇವಿ ಅವರ ಶಿಷ್ಯರು ಪ್ರಸ್ತುತಪಡಿಸಿದ ನಾಟ್ಯ ಪ್ರದರ್ಶನ ನಟರಾಜನ ಪಲ್ಲಕ್ಕಿ ಉತ್ಸವದೊಂದಿಗೆ ಮಲ್ಲಾರಿಯ ದಿವ್ಯ ನಾದದಿಂದ ಆರಂಭಗೊಂಡು ಭಕ್ತಿ ಹಾಗೂ ಶಾಂತಿಯ ವಾತಾವರಣವನ್ನು ನಿರ್ಮಿಸಿತು. ಪುμÁ್ಪಂಜಲಿ ಮೂಲಕ ದೇವರಿಗೆ ನಮನ ಸಲ್ಲಿಸಲಾಯಿತು.

ಭಜ ಮಾನಸ, ನಟೇಶಕೌತ್ವಂ ಹಾಗೂ ನರಸಿಂಹ ಕೌತ್ವಂ ಕೃತಿಗಳಲ್ಲಿ ಶಿಷ್ಯರ ಲಯ, ತಾಳ, ಅಂಗಶುದ್ಧಿ ಮತ್ತು ಶೈಲಿಯ ಸೌಂದರ್ಯ ಸ್ಪಷ್ಟವಾಗಿ ವ್ಯಕ್ತವಾದವು.

ಶಿವಪಂಚಾಕ್ಷರಿ ಹಾಗೂ ಭೋ ಶಂಭೋ ಕೃತಿಗಳ ಮೂಲಕ ಭಕ್ತಿರಸದ ಪರಿಪೂರ್ಣತೆ ಮೂಡಿಬಂತು. ವಿಶೇಷ ಆಕರ್ಷಣೆಯಾಗಿ ಶಂಕರಾಭರಣ ರಾಗದಲ್ಲಿ ನೃತ್ಯರೂಪಕವಾಗಿ ಪ್ರಸ್ತುತಪಡಿಸಿದ ಭಗವಾನ್ ಶಿವನ ಆಭರಣ ಕಥಾನಕವು ಶಿಲ್ಪಸೌಂದರ್ಯ ಮತ್ತು ನೃತ್ಯಕಥನದ ಅದ್ಭುತ ಸಂಯೋಜನೆಯಾಗಿತ್ತು.

ನಂತರ ಶ್ರೀದೇವಿ ಕೃತಿ ‘ಕಂಜದಳಯತಾಕ್ಷಿ’ಯಲ್ಲಿ ಶಾಂತತೆ ಮತ್ತು ಶಕ್ತಿಯ ಸ್ವರೂಪ ಮನೋಹರವಾಗಿ ಅನಾವರಣಗೊಂಡಿತು.

ಕಾರ್ಯಕ್ರಮದ ತಾರಕ ಕ್ಷಣವಾಗಿ ಶಿವತಾಂಡವವು ಪ್ರಸ್ತುತಗೊಂಡು, ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು. ಅಂತಿಮವಾಗಿ ಸಿಂಹೇಂದ್ರ ಮಧ್ಯಮ ತಿಲ್ಲಾನಾಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡು. ಶ್ರೋತೃವರ್ಗವನ್ನು ಆನಂದಭಾವದಲ್ಲಿ ಲೀನಗೊಳಿಸಿತು.

ರಿತನ್ಯಾಎನ್, ವೈಷ್ಣವಿ ಬಿ.ಎಂ, ಹರ್ಷಿತಾ .ಸಿ, ಯಶವಂತ್. ಎನ್, ಹರ್ಷಿಣಿ ವಿ.ಆರ್, ಜಾಹ್ನವಿ ಎಸ್, ಸಮನ್ವಿತಾ. ಎಚ್, ಪುನರ್ವಿ ಆಚಾರ್ಯ .ಕೆ, ಮಿತ್ರವಿಂದಾ .ಎಂ, ತ್ರಯೀ ಕುಲಕರ್ಣಿ, ಸುದೀಕ್ಷಾ ಎಂ.ಪಿ. ಹಾಗೂ ಶ್ರದ್ಧಾ ಶೇಷಶಾಯಿ-ಕಲಾವಿದರು ಗುರು ವಿದುಷಿ ಬಿ.ಯು. ಮಣಿಕ್ಯಾದೇವಿ ಮಾರ್ಗದರ್ಶನದಲ್ಲಿ, ಪ್ರದರ್ಶಿಸಿದ ಈ ನೃತ್ಯಕಾರ್ಯಕ್ರಮವು ಶಿಸ್ತು, ಸಾಧನೆ ಮತ್ತು ಭಕ್ತಿಯ ಸಮನ್ವಯತೆಯಿಂದ ಕೂಡಿದ ಮನಮೋಹಕ ಹಾಗೂ ಸ್ಮರಣೀಯ ಕಲಾರ್ಪಣೆಯಾಗಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆಯಿತು.

ಹಂಪಿಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಆಯೋಜಿಸಿದ ಕಾರ್ಯಕ್ರಮಕೆ ಹೊಸಪೇಟೆಯ ಅಂಜಲಿ ಭರತನಾಟ್ಯ ಕಲಾಕೇಂದ್ರದ ನಿರ್ದೇಶಕರಾದ ವಿದುಷಿ ಅಂಜಲಿ ಅವರು ಸಹಕರಿಸಿದರು. ಗುರುಕುಲ ಕಲಾ ಪ್ರತಿಷ್ಠಾನದ ವೆಂಕಟೇಶ್ ಬಡಿಗೇರ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande