ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ತ್ರೆಮಾಸಿಕ ಸಭೆ
ಜಿಲ್ಲಾ ಮಟ್ಟದ ಬ್ಯಾಂಕರ್‌ಗಳ ತ್ರೆಮಾಸಿಕ ಸಭೆ
ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬ್ಯಾಂಕರ್‌ಗಳ ತ್ರೆöÊ ಮಾಸಿಕ ಸಭೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರವೀಣ್ ಬಾಗೇವಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.


ಕೋಲಾರ, ಡಿಸೆಂಬರ್ ೨೨ (ಹಿ.ಸ) :

ಆ್ಯಂಕರ್ : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಪ್ರವೀಣ್ ಪಿ ಬಾಗೇವಾಡಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಾಲೋಚನೆ ಸಮಿತಿಸಭೆಯು ನಡೆಯಿತು

ಸೆಪ್ಟೆಂಬರ್ ೨೦೨೫ ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ ಆದ್ಯತೆಯ ವಲಯದ ಮುಂಗಡಗಳ ಕಾರ್ಯಕ್ಷಮತೆ, ಸರ್ಕಾರಿ ಪ್ರಾಯೋಜಿತ ಯೋಜನೆಗಳ ಅನುಷ್ಠಾನದ ಕುರಿತು ಬ್ಯಾಂಕರ್‌ಗಳ ಪರಿಶೀಲನೆಗಾಗಿ ತ್ರೆöÊಮಾಸಿಕ ಸಭೆಯಲ್ಲಿಚರ್ಚಿಸಲಾಯಿತು.

ಸಿಇಒ ಎಲ್ಲಾ ಬ್ಯಾಂಕರ್‌ಗಳಿಗೆ ಎಲ್ಲಾ ಸರ್ಕಾರಿ ಯೋಜನೆಯ ಸಾಲಗಳನ್ನು ಸಮಯದೊಳಗೆವಿಲೇವಾರಿ ಮಾಡುವಂತೆ ಸೂಚಿಸಿದರು ಮತ್ತು ಕೃಷಿ ಸೇರಿದಂತೆ ಆದ್ಯತೆಯ ವಲಯದ ಸಾಲಗಳಲ್ಲಿ ಹೆಚ್ಚಿನ ಸಾಲವನ್ನು ನೀಡುವಂತೆ ಖಾಸಗಿ ವಲಯದ ಬ್ಯಾಂಕುಗಳಿಗೆ ಸೂಚಿಸಿದರು.

ಅಟಲ್ ಪಿಂಚಣಿ ಯೋಜನೆಯಡಿ ಗುರಿಯನ್ನು ಸಾಧಿಸಿದ್ದಕ್ಕಾಗಿ ಸಿಇಒ ಬ್ಯಾಂಕರ್‌ಗಳನ್ನು ಅಭಿನಂದಿಸಿದರು.

ಭದ್ರತಾ ಸುರಕ್ಷಾತಾ ಯೋಜನೆಗಳ (ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ) ಅಡಿಯಲ್ಲಿ ಗರಿಷ್ಠ ಜನರನ್ನು ಒಳಗೊಳ್ಳುವಂತೆ ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.

ಪ್ರಧಾನ್ ಮಂತ್ರ ಸುರಕ್ಷಾ ಯೋಜನೆಯ ವಾರ್ಷಿಕ ಪ್ರೀಮಿಯಂ ರೂ. ೨೦ ಮತ್ತು ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯಡಿಯಲ್ಲಿ ವಾರ್ಷಿಕ ಪ್ರೀಮಿಯಂ ರೂ. ೪೩೬ (ಪ್ರತಿ ತ್ರೈಮಾಸಿಕಕ್ಕೆ ಪ್ರೋ-ರೇಟಾ ಆಧಾರ). ಗ್ರಾಹಕರು ಈ ಯೋಜನೆಗಳನ್ನು ಬಳಸಿಕೊಳ್ಳುವಂತೆ ಸಿಇಒ ವಿನಂತಿಸಿದರು.

ಪಿಎಂಎಫ್‌ಎ0ಇ ಯೋಜನೆಯಡಿ ಹೆಚ್ಚಿನ ಸಂಖ್ಯೆಯ ಸಾಲಗಳನ್ನು ಮಂಜೂರು ಮಾಡುವಂತೆ ಸಿಇಒ ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು. ಸಭೆಯಲ್ಲಿ ಆರ್‌ಬಿಐನಎಲ್‌ಡಿಒ ಶೀಲ್ಪ್ರಿಯಾಗೌತಮ್, ಡಿಡಿಎಂ ನಬಾರ್ಡ್ ಹಿಮಾಂಶು ಶುಕ್ಲಾ, ಕೆನರಾ ಬ್ಯಾಂಕಿನ ಪ್ರಾದೇಶಿಕ ಬ್ಯಾಂಕ್ ಮುಖ್ಯಸ್ಥ ಅಶೋಕ್ ಕುಮಾರ್, ಪ್ರಮುಖ ಜಿಲ್ಲಾ ವ್ಯವಸ್ಥಾಪಕ ಮಹಾದೇವ್ಜೋಶಿ ಮತ್ತು ಅಧಿಕಾರಿ ಬಿ.ಎಸ್ ಆನಂದ್, ಎಲ್ಲಾ ಜಿಲ್ಲಾ ಮಟ್ಟದ ಬ್ಯಾಂಕ್ ಪ್ರತಿನಿಧಿಗಳು ಮತ್ತು ಸರ್ಕಾರಿ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಚಿತ್ರ : ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬ್ಯಾಂಕರ್‌ಗಳ ತ್ರೆöÊ ಮಾಸಿಕ ಸಭೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರವೀಣ್ ಬಾಗೇವಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande