ಬಬಲೇಶ್ವರ ಮತಕ್ಷೇತ್ರ ಬಿಜೆಪಿ ಮುಕ್ತವಾಗುತ್ತಿದೆ : ಸಚಿವ ಪಾಟೀಲ
ವಿಜಯಪುರ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಬಲೇಶ್ವರ ಮತಕ್ಷೇತ್ರ ಬಿಜೆಪಿ ಮುಕ್ತವಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ. ಇಂದು ಸೋಮವಾರ ನಗರದ ಸಚಿವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಮಡಿ ಗ್ರಾಮದ ಬಿಜ
ಬಿಜೆಪಿ


ವಿಜಯಪುರ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಬಲೇಶ್ವರ ಮತಕ್ಷೇತ್ರ ಬಿಜೆಪಿ ಮುಕ್ತವಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ‌ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.

ಇಂದು ಸೋಮವಾರ ನಗರದ ಸಚಿವರ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನಮಡಿ ಗ್ರಾಮದ ಬಿಜೆಪಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮತ್ತು‌ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಜೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.

ಬಬಲೇಶ್ವರ ಮತಕ್ಷೇತ್ರದಲ್ಲಿ ಬಿಜೆಪಿಯ ಅರ್ಧದಷ್ಟು ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ. ಆರು ಬ್ಯಾಚ್ ಗಳಲ್ಲಿ ಈಗ ಒಂದು ಬ್ಯಾಚ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದೆ. ಕನಮಡಿಯ ಸುಭಾಸಗೌಡ ಪಾಟೀಲ ಅವರ ಪುತ್ರ ಪ್ರಶಾಂತ ಸುಭಾಸಗೌಡ ಪಾಟೀಲ ಅವರು ಕಾಂಗ್ರೆಸ್ ಸೇರ್ಪಡೆಯಾಗಿ ಮರಳಿ ಮನೆಗೆ ಬಂದಿದ್ದಾರೆ. ಅವರಿಗೆ ಸ್ವಾಗತ ಕೋರುತ್ತೇನೆ. ಕನಮಡಿ ಗೌಡರ ಮನೆತನದ ಸಂಬಂಧಿಕರು ಜಿಲ್ಲಾದ್ಯಂತ ಇದ್ದಾರೆ. ಅವರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಕನಮಡಿ ಮುಖಂಡ ಪ್ರಶಾಂತ ಸುಭಾಸಗೌಡ ಪಾಟೀಲ ಮಾತನಾಡಿ, ಅಕ್ಟೋಬರ್ ನಲ್ಲಿ ಯುನಿಯನ್ ಚುನಾವಣೆಯಲ್ಲಿ ನನ್ನನ್ನು ಬಬಲೇಶ್ವರ ಬಿಜೆಪಿ ಮುಖಂಡ ಮೊದಲು ಕಣಕ್ಕಿಳಿಸಿ ತರ ನಾಮಪತ್ರ ವಾಪಸ್ ಪಡೆಯಲು ಹೇಳಿದ್ದರು. ಆದರೆ, ಪ್ರತಿಷ್ಠೆಯ ಪ್ರಶ್ನೆಯಾದ ಹಿನ್ನೆಲೆ ಕಣದಲ್ಲಿ ಉಳಿದಿದ್ದೆ. ಆಗ ಶಾಸಕ‌ ಸುನೀಲಗೌಡ ಪಾಟೀಲ ಅವರು ನನ್ನನ್ನು ಬೆಂಬಲಿಸಿದರು. ಅಲ್ಲದೇ, ಚುನಾವಣೆಯಲ್ಲಿ ನಾನು‌ ಸಮಮತ ಪಡೆದು ನಮ್ಮ ಕನಮಡಿ ಗೌಡರ ಮನೆತನದ ಅಸ್ತಿತ್ವ ಉಳಿಸಿಕೊಳ್ಳಲು ಶಾಸಕರು ನೆರವಾದರು. ಹೀಗಾಗಿ ನಾವು ಬೇಷರತ್ತಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇವೆ ಎಂದು ತಿಳಿಸಿದರು.

ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ ಮುಂತಾದವರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಇಲಾಯಿ ತಿಕೋಟಿ , ವಿನೋಬಗೌಡ ಬಿರಾದಾರ, ಅಶೋಕ ಬಿರಾದಾರ, ಮುಬಾರಕ ಮುಲ್ಲಾ, ರಾಜು ತಿಕೋಟಿ, ದಾವಲ್ ಪಾರ್ಥನಹಳ್ಳಿ, ಜಾಕಿರ ತಿಕೋಟಿ, ಅಪ್ಪಾಸಾಬ ಮೋರೆ, ಅಲ್ಲಿಸಾಬ್ ಬೈಲಹೊಂಗಲ, ನಿಂಗಪ್ಪಾ ಶೀಳಿನ, ಹೂವಣ್ಣ ನಾಟಿಕಾರ, ಬಸಪ್ಪ ರಾಮತೀರ್ಥ, ರಾಯಪ್ಪ ನಾಟಿಕಾರ, ಮೈಬೂಬಸಾಬ್ ಮುಲ್ಲಾ ಸೇರಿದಂತೆ 120ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾದರು.

ಈ ವೇಳೆ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅಬ್ದುಲ ಹಮೀದ್ ಮುಶ್ರಿಫ್, ಡಾ. ಗಂಗಾಧರ ಸಂಬಣ್ಣಿ, ಡಾ. ಗಂಗಾಧರ ಸಂಬಣ್ಣಿ, ಟಪಾಲ್ ಎಂಜಿನಿಯರ್, ಸಿದಗೊಂಡ ರುದ್ರಗೌಡ ವಿದ್ಯಾರಾಣಿ ತುಂಗಳ, ಜಮೀರ್ ಅಹ್ಮದ್ ಬಕ್ಷಿ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande