ಜೀನ್ಸ್ ಪಾರ್ಕಗಾಗಿ ಜವಳಿ ಉದ್ದಿಮೆಗಳಿಂದ ಅರ್ಜಿ
ಬಳ್ಳಾರಿ, 22 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಬಳ್ಳಾರಿಯ ಸಂಜೀವರಾಯನಕೋಟೆ ಗ್ರಾಮದ ವ್ಯಾಪ್ತಿಯಲ್ಲಿ 154-58 ಎಕರೆ ಜೀನ್ಸ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೈಗಾರಿಕಾ ನಿವೇಶನಗಳ ಹಂಚಿಕೆಗೆ
ಜೀನ್ಸ್ ಪಾರ್ಕಗಾಗಿ ಜವಳಿ ಉದ್ದಿಮೆಗಳಿಂದ ಅರ್ಜಿ


ಬಳ್ಳಾರಿ, 22 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಬಳ್ಳಾರಿಯ ಸಂಜೀವರಾಯನಕೋಟೆ ಗ್ರಾಮದ ವ್ಯಾಪ್ತಿಯಲ್ಲಿ 154-58 ಎಕರೆ ಜೀನ್ಸ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಪ್ರತಿ ಎಕರೆಗೆ ತಾತ್ಕಾಲಿಕ ದರ 135 ಲಕ್ಷ ರೂಗಳನ್ನು ನಿಗಪಡಿಸಿ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಕೈಗಾರಿಕಾ ನಿವೇಶನಗಳ ಹಂಚಿಕೆಗೆ ದರವನ್ನು ಪರಿಷ್ಕರಣೆ ಮಾಡಿ ತಾತ್ಕಾಲಿಕವಾಗಿ ಪ್ರತಿ ಎಕರೆಗೆ 67.50 ಲಕ್ಷ ರೂಗಳನ್ನು ನಿಗಪಡಿಸಿಲಾಗಿದ್ದು, ಜಿಲ್ಲೆಯ ಆಸಕ್ತ ಜವಳಿ ಉದ್ದಿಮೆದಾರರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಆಸಕ್ತರು ಕೈಗಾರಿಕಾ ನಿವೇಶನಗಳ ಹಂಚಿಕೆಗೆ ಆನ್‍ಲೈನ್ ವೆಬ್‍ಸೈಟ್ https://investkarnataka.co.in/karnataka-udyog-mitra ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಐಎಡಿಬಿ ಕಚೇರಿ ಅಥವಾ ದೂ.9964768334, 9901313417, 9844837264 ಗೆ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande