
ಗಂಗಾವತಿ, 22 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಗೆ ಕಿಷ್ಕಿಂಧ ಜಿಲ್ಲೆ ಎಂದು ಮತ್ತು ಕೊಪ್ಪಳ ಲೋಕ ಸಭಾ ಕ್ಷೇತ್ರಕ್ಕೆ ಕಿಷ್ಕಿಂಧ ಲೋಕ ಸಭಾ ಕ್ಷೇತ್ರ ಎಂದು ನಾಮಕರಣ ಮಾಡಲು ಕೋರಿ ಪರಿಸರ ಪ್ರೇಮಿ ಕುಮಾರಿ ಸಿಂಧು ಡಿ. ಅವರು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಹೊಸಪೇಟೆಯ ಕಮಲಾಪುರದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವ ಕುಮಾರಿ ಡಿ. ಸಿಂಧು ಅವರು,
ಅಂಜನಾದ್ರಿಯು ಹನುಮಂತನ ನಾಡು. ಶಬರಿ ವಾಸವಿದ್ದ ಬೀಡು. ಪಂಪಾಸರೋವರ ಇತರೆ ಐತಿಹಾಸಿಕ, ಬೌಗೋಳಿಕ ಹಾಗು ಪೌರಾಣಿಕವಾಗಿ ಅತ್ಯಂತ ಮಹತ್ವದ ಸ್ಥಳ ಇದಾಗಿದೆ. ರಾಮಾಯಣ, ಮಹಾಭಾರತದ ಕಾಲ ಘಟದಲ್ಲೂ ಈ ಸ್ಥಳ ಉಲ್ಲೇಖವಿದೆ. ಅಯೋಧ್ಯೆ ಮತ್ತು ಅಂಜನಾದ್ರಿ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಕಾರಣ ಈ ಜಿಲ್ಲೆಯನ್ನು ಕಿಷ್ಕಿಂಧಾ ಜಿಲ್ಲೆ ಮತ್ತು ಈ ಲೋಕ ಸಭಾ ಕ್ಷೇತ್ರವನ್ನು ಕಿಷ್ಕಿಂಧಾ ಕ್ಷೇತ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಅವರು ವಿವರಿಸಿದ್ದಾರೆ.
ದೇಶದ ಎಲ್ಲಾ ಲೋಕ ಸಭೆ ಹಾಗು ವಿಧಾನ ಸಭಾ ಕ್ಷೇತ್ರಗಳಲ್ಲಿ ಸುಗ್ರೀವನ ಮೂರ್ತಿ ಪ್ರತಿಷ್ಠಾಪನೆ ಆಗಬೇಕು. ಗಂಗಾವತಿ ಅಯೋಧ್ಯಾ, ಗಂಗಾವತಿ - ರಾಮೇಶ್ವರ ರೈಲುಗಳಿಗೆ `ಕಿಷ್ಕಿಂಧೆ ರೈಲು ಮಾರ್ಗ’ ಎಂದು ನಾಮಕರಣ ಮಾಡಬೇಕು ಎಂದು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್