
ವಿಜಯಪುರ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಅಥಣಿ ತಾಲೂಕಿನ ಕೊಕಟನೂರದಲ್ಲಿ ನಡೆಯಲಿರುವ ಶ್ರೀ ಯಲ್ಲಮ್ಮದೇವಿ ಜಾತ್ರೆ ಅಂಗವಾಗಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಜಯಪುರ ವಿಭಾಗದಿಂದ ಡಿಸೆಂಬರ್ 15 ರಿಂದ ಡಿಸೆಂಬರ್ 21ರವರೆಗೆ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟಿ ಹಾಗೂ ಬಸವನ ಬಾಗೇವಾಡಿ ಘಟಕದ ಕೇಂದ್ರ ಬಸ್ ನಿಲ್ದಾಣಗಳಿಂದ ಕೊಕಟನೂರಕ್ಕೆ ವಿಶೇಷ ಸಾರಿಗೆ ವ್ಯವಸ್ಥೆ ಇರಲಿವೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಘಟಕ ವ್ಯವಸ್ಥಾಪಕರ ಸಂಖ್ಯೆ ವಿಜಯಪುರ-1: 7760992263, ವಿಜಯಪುರ-2: 7760992264, ಇಂಡಿ- 7760992265, ಸಿಂದಗಿ- 7760992266, ಮುದ್ದೇಬಿಹಾಳ- 7760992267, ತಾಳಿಕೋಟ- 7760992268, ಬಸವನ ಬಾಗೇವಾಡಿ- 7760992269, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂರವಾಣಿ ಸಂಖ್ಯೆ 08352-251344 ಹಾಗೂ ಮೊಬೈಲ್ ಸಂಖ್ಯೆ – 7760992258 ಸಂಪರ್ಕಿಸಬಹುದಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಯ ಪ್ರಕಟಣೆ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande