
ಹಾಸನ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ವತಿಯಿಂದ ಡಿ.15 ರಂದು 66/11ಕೆ.ವಿ ದುದ್ದ ವಿದ್ಯುತ್ ವಿತರಣಾ ಕೇಂದ್ರದಲ್ಲಿ 66ಕೆ.ವಿ ಹೊರಾಂಗಣ ಆವರಣದ ವಾಹಕವನ್ನು ಉನ್ನತೀಕರಿಸುವ ಕೆಲಸವನ್ನು ಹಮ್ಮಿಕೊಂಡಿರುವುದರಿ0ದ, ಸದರಿ ದಿನಾಂಕದಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 06 ಗಂಟೆ ಯವರೆಗೆ ದುದ್ದ ವಿ.ವಿ ಕೇಂದ್ರದಿಂದ ಸರಬರಾಜಾಗುವ ನಂದಿಹಳ್ಳಿ, ಆನೆಹಳ್ಳಿ, ಹೆರಗು, ದುದ್ದ, ಗೌಡಗೆರೆ, ಸಂತೆಕೊಪ್ಪಲು, ಪಿ-ಕೋಡಿಹಳ್ಳಿ, ಹೆಚ್-ಮೈಲನಹಳ್ಳಿ, ಕಾರೇಬೋರೆ, ಕಿತ್ತಾನೆಕೆರೆ ಮತ್ತು ಅರಸೀಹಳ್ಳಿ ಮತ್ತು ಸುತ್ತಮುತ್ತಲ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕವಿಪ್ರನಿನಿ, ಹಾಸನ ಕಾರ್ಯಾಚರಣೆಗಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa