
ಹಾವೇರಿ, 14 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ನೂತನವಾಗಿ ಆಯ್ಕೆಯಾಗಿರುವ ಮಂಡಲ ಅಧ್ಯಕ್ಷರು ಜಿಲ್ಲಾ ಘಟಕದೊಂದಿಗೆ ಸೇರಿ ಮುಂದಿನ ಹತ್ತು ದಿನಗಳಲ್ಲಿ ಹಾವೇರಿ ಜಿಲ್ಲೆಯಲ್ಲಿ ಕೆಟ್ಟಿರುವ ರಸ್ತೆಗಳ ಫೋಟೊ ತೆಗೆದು ರಸ್ತೆ ಗ್ಯಾರೆಂಟಿ ಕೊಡುವಂತೆ ಆಂದೋಲನ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತೀಯ ಜನತಾ ಪಾರ್ಟಿ ಹಾವೇರಿ ವಿಧಾನಸಭಾ ಮತಕ್ಷೇತ್ರದ ವತಿಯಿಂದ ಏರ್ಪಡಿಸಿದ ಹಾವೇರಿ ನಗರ - ಹಾವೇರಿ ಗ್ರಾಮೀಣ - ಹತ್ತಿಮತ್ತೂರ ಮಂಡಲಗಳ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯಾವಾಗ ಒಳ್ಳೆಯ ಕೆಲಸ ಮಾಡಲು ಸೇರುತ್ತೇವೆ ಅದೆ ಒಳ್ಳೆಯ ಗಳಿಗೆ. ಬುದ್ದಿ ಮತ್ತು ಹೃದಯ ಯಾವಾಗ ಒಂದೇ ಸಮಯಕ್ಕೆ ಸೇರುತ್ತದೆ ಅದೆ ಅಮೃತ ಘಳಿಗೆ ಈಗ ಹಾವೇರಿ ಬಿಜೆಪಿಗೆ ಅಮೃತ ಘಳಿಗೆ ಬಂದಿದೆ. ಹಿಂದೆ ಇಬ್ಬರು ಮಂಡಲ ಅಧ್ಯಕ್ಷರು ಚನ್ನಾಗಿ ಕೆಲಸ ಮಾಡಿದ್ದಾರೆ. ಇನ್ನೊಂದು ಮಂಡಲ ಮಾಡುವ ಸಲುವಾಗಿ ಆಯ್ಕೆ ತಡವಾಯಿತು. ಹತ್ತಿ ಮತ್ತೂರು ಅಧ್ಯಕ್ಷರಾದರೆ ಅನುಕೂಲವಾಗುತ್ತದೆ ಎನ್ನುವ ಕಾರಣದಿಂದ ತಡವಾಯಿತು. ತಡವಾಗಲು ಎರಡು ಕಾರಣ ಇದೆ ಹಳಬರು ಒಳ್ಳೆಯ ಕೆಲಸ ಮಾಡಿದ್ದಾರೆ ಅವರನ್ನು ಹೇಗೆ ತೆಗೆಯುವುದು ಹೊಸಬರು ಬಹಳ ಜನ ಇದ್ದಾರೆ ಅವರಲ್ಲಿ ಯಾರನ್ನು ಮಾಡುವುದು ಎನ್ನುವ ಜಿಜ್ಞಾಸೆ ಇರುತ್ತದೆ. ಎಲ್ಲವೂ ಸರಳವಾಗಿ ನಡೆದಿದೆ ಎಂದು ಹೇಳಿದರು.
ನೂತನ ಅಧ್ಯಕ್ಷರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಕೊಡುವ ಕೆಲಸ ನಿಷ್ಟೆಯಿಂದ ಮಾಡಿ ನಾವು ನಿಮಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ. ರಾಜಕೀಯವಾಗಿ ಪ್ರಮುಖ ಘಟ್ಟದಲ್ಲಿ ನಾವಿದ್ದೇವೆ. ಚುನಾವಣೆ ಇನ್ನೂ ಎರಡೂವರೆ ವರ್ಷ ಇದೆ. ಆದರೆ, ಯುದ್ದದ ತಯಾರಿ ಶಾಂತಿಯ ಕಾಲದಲ್ಲಿ ಮಾಡಬೇಕು. ನಮ್ಮ ಪಕ್ಷವನ್ನು ಬೂತ ಮಟ್ಟದಲ್ಲಿ ತಯಾರಿ ಮಾಡುವ ಕಾಲ ಬಂದಿದೆ. ಸಕ್ರೀಯರಾದವರನ್ನು ಎಸ್ಸಿ ಎಸ್ಟಿ ರೈತರು, ಯುವಕರು, ಮಹಿಳೆಯರ ಘಟಕ ಮಾಡಬೇಕು. ಏಳು ಘಟಕ ಮಾಡಿದರೆ ಸುಮಾರು ಎಪ್ಪತ್ತು ಜನರಾಗುತ್ತಾರೆ. ಬೂತ್ ಪದಾಧಿಕಾರಿಗಳ ಆಯ್ಕೆಯನ್ನು ಪ್ರಾಮಾಣಿಕವಾಗಿ ಮಾಡಬೇಕು. ಎಲ್ಲ ಬೂತುಗಳಿಗೆ ಹೋಗಿ ಹಿರಿಯುರು ಯುವಕರನ್ನು ಸೇರಿಸಿ ಆಯ್ಕೆ ಮಾಡಬೇಕು ಎಂದು ಸಲಹೆ ನೀಡಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa